ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ- ಪೊಲೀಸ್ ಇಲಾಖೆಗೆ ಸಿಎಂ ಸಿದ್ದು ಖಡಕ್ ಎಚ್ಚರಿಕೆ

ರಾಜ್ಯದ ನೂತನ ಡಿಜಿ-ಐಜಿಪಿಯಾಗಿ ನೀಲಮಣಿ ರಾಜು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನೃಪತುಂಗ ರಸ್ತೆಯ ಪೊಲೀಸ್ ಕಚೇರಿಯಲ್ಲಿ ಸಭೆ ನಡೆಸುವುದು ವಾಡಿಕೆ ಆದರೇ ಈ ಸಿಎಂ ಸಿದ್ದರಾಮಯ್ಯ ಈ ಭಾರಿ ಗೃಹಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಡಿಜಿ-ಐಜಿ ನೀಲಮಣಿ ರಾಜು ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ ಡಿಜಿಪಿಗಳು, ಐಜಿಪಿ ಹಾಗೂ ಎಸ್ಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಎಸ್ಪಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಬರುವ ಟಿಪ್ಪು ಜಯಂತಿ ಸಂದರ್ಭದಲ್ಲಿ ಭದ್ರತೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಿಎಂ ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಹೆಣ್ಣುಮಗಳೊಬ್ಬಳು ಪೊಲೀಸ್ ಮಹಾನಿರ್ದೇಶಕಿಯಾಗಿದ್ದಾರೆ. ಇವತ್ತು ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ.

ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಆದರೇ ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಈಗಾಗಲೇ ಟಿಪ್ಪುಜಯಂತಿ ಹಾಗೂ ಪರಿವರ್ತನಾ ರ್ಯಾಲಿ ಬಗ್ಗೆ ಚರ್ಚೆ ಮಾಡಿದ್ದೇವೆ. ಮೂರನೇ ವರ್ಷ ಟಿಪ್ಪು  ಜಯಂತಿ ಮಾಡಿದ್ದೇವೆ. ಮೊದಲ ವರ್ಷ ಆರ್.ಎಸ್.ಎಸ್.ನವರಿಂದಾಗಿ ಗೊಂದಲವಾಗಿತ್ತು. ಈ ಬಾರಿ ಇಲಾಖೆಗೆ ಖಡಕ್ ಕ್ರಮಕೈಗೊಳ್ಳಲು ಎಚ್ಚರಿಕೆ ನೀಡಿದ್ದೇನೆ ಎಂದರು.