ಭ್ರಷ್ಟರ ರಕ್ಷಣೆ – ದುಷ್ಟರ ಸಲಹುವಿಕೆಗೆ ಮೀಸಲಿಟ್ಟ ಸಿದ್ದರಾಮಯ್ಯ ಕೊನೇ ಸಂಪುಟ ಸಭೆ !! ನಾಳೆ ನಡೆಯಲಿದೆ ಮಹತ್ವದ ಕ್ಯಾಬಿನೆಟ್ ಮೀಟಿಂಗ್ !!

ನಾಳೆ ರಾಜ್ಯ ಸರಕಾರದ ಕೊನೇ ಸಚಿವ ಸಂಪುಟ ಸಭೆ ನಡೆಯಲಿದ್ದು, ಹಲವು ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡುವ ಮತ್ತು ಭ್ರಷ್ಟರನ್ನು ಸಲಹುವ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಭ್ರಷ್ಟಾಚಾರ ನಡೆಸಿ ಜೈಲು ಪಾಲಾದವರಿಗೆ ಕ್ಲೀನ್​​ ಚಿಟ್ ಕೊಡಲು ನಾಳೆ ಸಂಜೆ 6 ಗಂಟೆಗೆ ನಡೆಯೋ ತುರ್ತು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.

ad


ಐವರು ಕಡುಭ್ರಷ್ಟ ಅಧಿಕಾರಿಗಳಿಗೆ ಕ್ಲೀನ್​​ ಚಿಟ್​ ಕೊಡಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದ್ದು, ಲಕ್ಷ,ಲಕ್ಷ ಲಂಚಪಡೆದು ಡಿಸ್ಮಿಸ್​ ಆಗಿದ್ದ ಐವರು ಅಧಿಕಾರಿಗಳು ಮತ್ತೆ ಸೇವೆಗೆ ಮರಳಲಿದ್ದಾರೆ. ತೋಟಗಾರಿಕಾ ಅಧಿಕಾರಿ ಮುನಿಚೆಲುವಯ್ಯ, ವಲಯ ಅರಣ್ಯಾಧಿಕಾರಿ ರಮೇಶ್​,
ಕೆಎಎಸ್​ ಅಧಿಕಾರಿಗಳಾದ ಉದಯ್​ಕುಮಾರ್​ ಶೆಟ್ಟಿ, ಅನಿತಾ ಲಕ್ಷ್ಮಿ, ಬೀದರ್​​ನ ಭ್ರಷ್ಟ ಪೌರಾಯುಕ್ತ S.R​.ಗಾರವಾಡರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ರವಾನಿಸಲಾಗಿದೆ. ಈ ಪ್ರಸ್ತಾವನೆಗೆ ನಾಳೆ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಕಟ್ಟಕಡೆಯ ಕ್ಯಾಬಿನೆಟ್​ನ ದುರ್ಬಳಕೆ ಮಾಡಿಕೊಂಡು ಕಡು ಭ್ರಷ್ಟರಿಗೆ ರಕ್ಷಣೆ ನೀಡಲಾಗುತ್ತಿದೆ.

ಇದಿಷ್ಟೇ ಅಲ್ಲ ಕ್ಯಾಬಿನೆಟ್​ನಲ್ಲಿ ಇನ್ನಷ್ಟು ಭಾರೀ ಅಕ್ರಮದ ನಿರ್ಧಾರಗಳು ನಡೆಯಲಿದೆ. ಕೊನೆಯ ಕ್ಯಾಬಿನೆಟ್​ನಲ್ಲಿ ಇನ್ನಷ್ಟು ಅಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸಹಿ ಹಾಕಲಿದ್ದಾರೆ. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅತೀ ದೊಡ್ಡ ಹಗರಣವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮರಳು ಬಗೆಯಲು ಮುಕ್ತ ಅವಕಾಶ ನೀಡಲಾಗುತ್ತದೆ. ಮರಳು ದಂಧೆಕೋರರಿಗೆ ಅವಕಾಶ ಮಾಡಿಕೊಟ್ಟು ಚುನಾವಣೆ ಲಾಭಕ್ಕೆ ಪ್ಲಾನ್​​​ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್​ಫರ್ಟ್​ ಎಜುಕೇಷನ್​ ಸಂಸ್ಥೆಗೆ ಕೋಟ್ಯಂತರ ಮೌಲ್ಯದ ಭೂಮಿ ನೀಡಲಾಗುತ್ತಿದ್ದು ಮಂಗಳೂರು ತಾಲೂಕಿನ ಅರ್ಕುಲಾದ ಸ.ನಂ-73ರಲ್ಲಿರುವ 2.75 ಎಕರೆ ಜಮೀನು
ಖಾಸಗಿ ಶಾಲೆಗೆ ಬೆಲೆ ಬಾಳುತ್ತಿರುವ ಭೂಮಿ ನೀಡಲು ರಾಜ್ಯ ಸಚಿವ ಸಂಪುಟ ನಾಳೆ ನಿರ್ಧರಿಸಲಿದೆ.

ಭ್ರಷ್ಟಾಚಾರದ ಕೂಪ ವಿಶ್ವೇಶ್ವರಯ್ಯ ಜಲನಿಗಮಕ್ಕೆ 735 ಕೋಟಿ ಸಾಲ ಪಡೆಯಲು ಅನುಮತಿಯ ನಿರ್ಧಾರವನ್ನೂ ಸಚಿವ ಸಂಪುಟ ಮಾಡಲಿದೆ. ಎತ್ತಿನಹೊಳೆ ಯೋಜನೆ ಜಾರಿ ಮಾಡ್ತಿರುವ ವಿಶ್ವೇಶ್ವರಯ್ಯ ಜಲನಿಗಮ ಭಾರೀ ಅಕ್ರಮ ಕೇಳಿ ಬಂದ್ರೂ ರಾತ್ರೋರಾತ್ರಿ ಪೇಮೆಂಟ್​ ಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೆಲ್ಲವೂ ಸೇರಿ ಹಲವು ಪ್ರಮುಖ ನಿರ್ಧಾರಗಳಿಗೆ ಮುಂದಾದ ಸಿದ್ದು ಸರ್ಕಾರ ಕಟ್ಟಕಡೆಯ ಸಂಪುಟ ಸಭೆಯನ್ನು ಭ್ರಷ್ಟರಿಗಾಗಿ ಮೀಸಲಿಟ್ಟಿದ್ದು ದುರಂತ.