ಟ್ಯಾಕ್ಸ್​ ಕಟ್ಟಿದ ದುಡ್ಡಿನಲ್ಲಿ ಮಿಕ್ಸಿ,ಕುಕ್ಕರ್​ ಕೊಟ್ಟಿದ್ದೀನಿ- ಫ್ರಿಡ್ಜ್​ ಕೂಡಾ ಕೊಡ್ತಿನಿ-ಕೇಳೋಕೆ ನೀವ್ಯಾರು? ಭೈರತಿ ಸುರೇಶ್​ ಅವಾಜ್ ಹಾಕಿದ್ದ್ಯಾರಿಗೆ ಗೊತ್ತಾ?

ರಾಜ್ಯದಲ್ಲಿ ಚುನಾವಣೆ ನಿಗದಿತ ಅವಧಿಗಿಂತ ಸ್ವಲ್ಪ ವಿಳಂಬವಾಗೋ ಮುನ್ಸೂಚನೆ ಸಿಕ್ಕಿದ್ದರೂ ರಾಜ್ಯದಲ್ಲಿ ಚುನಾವಣೆ ರಾಜಕೀಯ ರಂಗೇರುತ್ತಲೇ ಇದೆ. ಸಿಲಿಕಾನ ಸಿಟಿಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಹೆಬ್ಬಾಳ್​​ದಲ್ಲಿ ಟಿಕೇಟ್​ಗಾಗಿ ಭರ್ಜರಿ ಪೈಪೋಟಿ ನಡೆದಿದ್ದು, ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವ ಭೈರತಿ ಸುರೇಶ್​ ಸಭೆಯೊಂದರಲ್ಲಿ ಬಿಜೆಪಿ ಎಮ್​ಎಲ್​ಎ ವಿರುದ್ಧ ತೊಡೆತಟ್ಟಿದ್ದು, ಅವರ ಆಕ್ರೋಶದ ಭಾಷಣ ಈ ಸಖತ್ ವೈರಲ್​ ಆಗಿದೆ.

ad


ಹೆಬ್ಬಾಳ ಕ್ಷೇತ್ರದಲ್ಲಿ ಸಿಎಂ ಆಪ್ತನಾಗಿರುವ ಭೈರತಿ ಸುರೇಶ್​ ಕಾಂಗ್ರೆಸ್​ನಿಂದ ಟಿಕೇಟ್​ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇತ್ತೀಚಿಗೆ ಮತದಾರರನ್ನು ಒಲೈಸಲು ಮುಂಧಾಗಿದ್ದ ಭೈರತಿ ಸುರೇಶ್​ ಮಿಕ್ಸರ್​, ಕುಕ್ಕರ್​ಗಳನ್ನು ವಿತರಿಸಿದ್ದರು. ಈ ವಿಚಾರ ವಾಟ್ಸಪ್​ ಹಾಗೂ ಪೇಸ್​ಬುಕ್​ನಲ್ಲಿ ವೈರಲ್​ ಆಗಿತ್ತು. ಇದನ್ನು ಗಮನಿಸಿ ಆಕ್ರೋಶಗೊಂಡ ಬೈರತಿ ಸುರೇಶ್​ ಸಭೆಯೊಂದರಲ್ಲಿ ಖಡಕ್​ ಆಗಿ ಮಾತನಾಡಿದ್ದು, ನನಗೇನೂ ಭಯವಿಲ್ಲ. ಯಾರು ದುಡ್ಡು ಹೊಡ್ಕೊಂಡು ಕಮಿಷನ್​ಗೋಸ್ಕರ ಕೆಲಸ ಮಾಡ್ತಾನೊ ಅವನಿಗೆ ಭಯವಿರುತ್ತೆ.‌ ನನಗಲ್ಲ. ನಾನು ಯಾವ ಕಮಿಷನ್ನೂ ಮುಟ್ಟಿಲ್ಲ, ಲಂಚನೂ ಹೊಡೆದಿಲ್ಲ. ನಾವೇನಾದರೂ ಒಳ್ಳೆ ಕೆಲಸ ಮಾಡೋಕೆ ಹೋದರೆ ಫೇಸ್ ಬುಕ್ ನಲ್ಲಿ ಹಾಕೋದು, ವಾಟ್ಸಪ್ ನಲ್ಲಿ ಹಾಕೋದು ಮಾಡ್ತಾರೆ. ಇವರು ಮಿಕ್ಸಿ ಕೊಟ್ಟರು, ಕುಕ್ಕರ್ ಕೊಟ್ಟರು, ಬ್ಲಾಂಕೆಟ್ ಕೊಟ್ರು ಅಂತ ಆರೋಪಿಸ್ತಾರೆ. ನಾನೇನು ಯಾರ ಹತ್ರನೂ ಲಂಚ ಪಡೆದು, ಕಮಿಷನ್ ಪಡೆದು ಇವನ್ನೆಲ್ಲಾ ಕೊಡ್ತಾ ಇಲ್ಲ. ನಾನು ದುಡಿದ ದುಡ್ಡಿಗೆ ಟ್ಯಾಕ್ಸ್ ಕಟ್ಟಿದ ಹಣದಲ್ಲಿ ಕೊಟ್ಟಿದ್ದೇನೆ.

ಮಿಕ್ಸಿನೂ ಕೊಡ್ತೀನಿ, ಟಿವಿನೂ ಕೊಡ್ತೀನಿ. ‌ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಫ್ರಿಡ್ಜೂ ಕೊಡ್ತೀನಿ ಎಂದಿದ್ದಾರೆ. ಅಲ್ಲದೇ ನಾನು ಫ್ರಿಡ್ಜು, ಮಿಕ್ಸಿ ಕೊಡೋದ್ರ ಬಗ್ಗೆ ಪ್ರಶ್ನೆ ಮಾಡೋಕೆ ಯಾರಿಗೂ ಯೋಗ್ಯತೆ ಇಲ್ಲ, ಅಧಿಕಾರನೂ ಇಲ್ಲ. ಮಿಸ್ಟರ್ ಎಂಎಲ್​​​ಎ ನಾರಾಯಣ ಸ್ವಾಮಿ, ಇಲ್ಲಿ ಕೇಳಪ್ಪ, ನಿನ್ನ ಚೇಲಾಗಳು ಯಾರಾದ್ರೂ ಇದ್ರೂ ಕೇಳಿಕೊಳ್ಳಲಿ. ನಿನ್ನ ತರಹ ಲಂಚಹೊಡೆದು ಸಂಪಾದನೆ ಮಾಡಿದ ದುಡ್ಡಲ್ಲಿ ಇದನ್ನೆಲ್ಲಾ ಕೊಡ್ತಿಲ್ಲಾ. ನಾನು ಲಂಚ ಹೊಡೆದು, ಕಮಿಷನ್ ಹೊಡೆದು ಸಂಪಾದನೆ ಮಾಡಿಲ್ಲ. ನಾನು ಕಷ್ಟಪಟ್ಟು, ಸರಕಾರಕ್ಕೆ ಒಂದು ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದೀನಿ. ಚುನಾವಣೆಗಾಗಿ ಇದನ್ನೆಲ್ಲಾ ಮಾಡ್ತಿಲ್ಲಾ, ನಮ್ಮ ತಾತನ ಕಾಲದಿಂದ ಮಾಡ್ತಾ ಇದೀವಿ.‌ಅದನ್ನು ಮುಂದುವರೆಸ್ತಿದ್ದೀವಿ ಅಷ್ಟೆ. ನನಗೆ ಬೆನ್ನೆಲುಬಾಗಿ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂದು ಗುಡುಗಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಮುನ್ನವೇ ರಾಜಕೀಯ ರೋಚಕ ಘಟ್ಟ ಪಡೆದುಕೊಳ್ಳುತ್ತಿರೋದಂತು ಸತ್ಯ.