ಮೀಸಲಾತಿ ಶೇಕಡಾ 50 ರಿಂದ 70 ಕ್ಕೆ ಏರಿಸಲು ಚಿಂತನೆ- ಸಿಎಂ ಸಿದ್ಧರಾಮಯ್ಯ!

CM Statement to Raise 50% reservation 70% in Janashirvada Conference.
CM Statement to Raise 50% reservation 70% in Janashirvada Conference.

ಚುನಾವಣೆ ಘೋಷಣೆಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ಚುನಾವಣೆ ರಾಜಕೀಯ ಆರಂಭಿಸಿದ್ದಾರೆ.

 

 

ಹೌದು ಈಗಾಗಲೇ ಮತದಾರರ ಮನವೊಲಿಸಲು ಮುಂಧಾಗಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ಶೇಕಡ್ 50 ರಷ್ಟಿರುವ ಮೀಸಲಾತಿಯನ್ನು 70 ಕ್ಕೆ ಏರಿಸಲು ಪ್ರಯತ್ನ ನಡೆದಿದೆ ಎನ್ನುವ ಮೂಲಕ ಮೀಸಲಾತಿ ಮತಗಳನ್ನು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.  ರಾಹುಲ್​ ಗಾಂಧಿ ಜನಾರ್ಶೀವಾದ ಯಾತ್ರೆಯಲ್ಲಿ ಪಾಲ್ಗೊಂಡು ರಾಯಚೂರಿನ ದೇವದುರ್ಗದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಬಳಿಕ ಮೀಸಲಾತಿ ಪ್ರಮಾಣ ಹೆಚ್ಚಳದ ಕುರಿತು ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.

 

ಈಗಾಗಲೇ ಸರ್ಕಾರ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಸಮೀಕ್ಷೆ ನಡೆದಿದ್ದು, ಈ ವರದಿ ಬಿಡುಗಡೆಯಾದ ಬಳಿಕ ಮೀಸಲಾತಿ ಹೆಚ್ಚಿಸುತ್ತೇವೆ. ಮೀಸಲಾತಿ ಹೆಚ್ಚಿಸಿದರೇ ಅದು ಕಾಂಗ್ರೆಸ್​​ನಿಂದ ಮಾತ್ರ ಸಾಧ್ಯ ಎಂದಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಯಾಕಂದ್ರೆ ಅದು ಮೇಲ್ವರ್ಗದವರ ಪಕ್ಷ ಎಂದು ಟೀಕಿಸಿದರು.
ಅಲ್ಲದೇ ಸಮಿತಿಯ ವರದಿ ಬಿಡುಗಡೆ ಬಳಿಕ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಧರಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಅಂಚಿನಲ್ಲಿರುವ ಕರ್ನಾಟಕದ ಮೀಸಲಾತಿ ಮತದಾರರನ್ನು ಸೆಳೆಯಲು ಸಿಎಂ ಸಿದ್ದರಾಮಯ್ಯ ಮುಂಧಾಗಿರೋದು ಇದರಿಂದ ಸ್ಪಷ್ಟವಾಗಿದ್ದು, ಇದಕ್ಕೆ ಜನರು ಹೇಗೆ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ

ಪ್ರತ್ಯುತ್ತರ ನೀಡಿ

Please enter your comment!
Please enter your name here