ಮೋದಿಗೆ ಸಿಎಂ ಸಿದ್ದು ಟ್ವಿಟ್​​​ ಸ್ವಾಗತ- ಸಿಎಂ ವ್ಯಂಗ್ಯಕ್ಕೆ ಬಿಎಸ್​ವೈ ರಿಟ್ವಿಟ್​​​ ಉತ್ತರ

ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್​​ನಲ್ಲಿ ಮೋದಿಗೆ ಸ್ವಾಗತ ಕೋರಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರಧಾನಿಗೆ ವಿಭಿನ್ನವಾಗಿ ಸ್ವಾಗತಿಸಿರುವ ಸಿಎಂ ದೇಶದ ನಂ.1 ರಾಜ್ಯ ಬೆಂಗಳೂರಿಗೆ ಸ್ವಾಗತ ಕೋರುತ್ತೇನೆ ಎಂದು ಟ್ವಿಟ್​ ಮಾಡಿದ್ದಾರೆ. ದೇಶದಲ್ಲಿ ಮುಂದುವರೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಹೊಡಿಕೆಯಲ್ಲಿ, ಬೆಳವಣಿಗೆಯಲ್ಲಿ, ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಎರಡನೇ ಟ್ವೀಟ್​ನಲ್ಲಿ ಬಹುದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಹೋರಾಟ ಮಾಡುತ್ತಿರುವ ನಮ್ಮ ಜನರಿಗೆ ಮಹದಾಯಿ ಸಮಸ್ಯೆಯನ್ನು ಕೊಡಲೇ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ಇನ್ನು ಪಿಎಂ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಟ್ವಿಟ್​​ ಮೂಲಕ ಸ್ವಾಗತ ಕೋರಿರುವುದನ್ನು ಗಮನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ರಿ ಟ್ವಿಟ್​​​ ಮಾಡಿದ್ದು, ಹೌದು. ಕರ್ನಾಟಕವು ಹಲವಾರು ಪ್ರಥಮಗಳಲ್ಲಿ ನಂ.1. ನಂ 1 ಭ್ರಷ್ಟ ರಾಜ್ಯ, 3,500+ ರೈತರ ಆತ್ಮಹತ್ಯೆಗಳು, ಕಾನೂನು ಸುವ್ಯವಸ್ಥೆ ಕುಸಿತ, ಅಧಿಕಾರಿಗಳ ನಿಗೂಢ ಸಾವು. ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಎಂದು ಬಿಎಸ್​ವೈ ತಮ್ಮ ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.