ಸಿಎಂ ಭತ್ತದ ನಾಟಿ ಮಾಡ್ತಿರೋದು ಸುಮ್ನೆ ಶೋ ಮಾಡೋಕೆ- ಬಳ್ಳಾರಿಯಲ್ಲಿ ಬಿಎಸ್​ವೈ ಟೀಕೆ!

ಇತ್ತ ಮಂಡ್ಯದಲ್ಲಿ ಸಿ.ಎಂ ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಆರಂಭಿಸಿದ್ದರೇ, ಇನ್ನೊಂದೆಡೆ ಬಳ್ಳಾರಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಿಷ್ಕ್ರಿಯಗೊಂಡಿದೆ, ವರ್ಗಾವಣೆ ಒಂದನ್ನು ಬೇರೆ ಯಾವ ಕೆಲಸಗಳೂ ಆಗ್ತಿಲ್ಲ, ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಪ್ರಾಪ್ತರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ, ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ, ಸರ್ಕಾರದ ವಿವಿಧ ಇಲಾಖೆಗಳ ಸ್ಥಿತಿ ಗತಿ ಏನಿದೆ? ಹಣಕಾಸು ಇಲಾಖೆಯ ಸ್ಥಿತಿಗತಿ ಏನಿದೆ ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ ಎಂದಿದ್ದಾರೆ.

ad

ಅಲ್ಲದೇ, ಸಿಎಂ ಭತ್ತದ ನಾಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಎಸ್​ವೈ ಮುಖ್ಯಮಂತ್ರಿ ಯಾಗಿ ಭತ್ತದ ನಾಟಿ ಮಾಡುವುದು ಅವರ ಒಂದು ಶೋ, ಅವರು ನೀರಾವರಿ ಸಂಬಂಧಿ ಕಾಮಗಾರಿಗಳನ್ನು ಮಾಡಬೇಕು – ರೈತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು, ಅದು ಬಿಟ್ಟು ಭತ್ತ ನಾಟಿ ಮಾಡೋದಲ್ಲ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿಯ ಬಗ್ಗೆ ಆತ್ಮಾವಲೋಕನ ಮಾಡಲಿದ್ದೇವೆ ಎಂದ ಬಿಎಸ್​ವೈ, ಸಚಿವ ಡಿ ಕೆ ಶಿವಕುಮಾರ್ ಸೇರಿದಂತೆ ಯಾರ ಬಗ್ಗೆಯೂ ನನಗೆ ಮೃದುಧೋರಣೆ ಇಲ್ಲ, ನಾನು ಎಲ್ಲರ ವಿರುದ್ಧವೂ ಹೋರಾಡಿದ್ದೇನೆ. ಅಖಂಡ ಕರ್ನಾಟಕ ಒಂದಾಗಿ ಇರಬೇಕು ಎಂಬುದೇ ನಮ್ಮ ಅಭಿಮತ ಎಂದರು.