ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ನೀಡದ್ದಕ್ಕೆ ಹಲ್ಲೆ ಮಾಡಿದ ಪ್ರಿನ್ಸಿಪಾಲ್​!!

ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಕಳೆದ ವರ್ಷದ ಕಹಿಘಟನೆಗಳ ಬಳಿಕ ಯಾವುದೇ ಸಮಸ್ಯೆಯಾಗದಂತೆ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜಾಗಿದೆ.

adಆದರೇ ಕೊಪ್ಪಳದಲ್ಲಿ ಮಾತ್ರ ಶಿಕ್ಷಕರೇ ತಲೆತಗ್ಗಿಸುವಂತ ಘಟನೆಯೊಂದು ನಡೆದಿದ್ದು, ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಅವಕಾಶ ನೀಡಿಲ್ಲ ಆರೋಪಿಸಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರೇ ಪರೀಕ್ಷಾ ನಿರ್ದೇಶಕನ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದಾನೆ.
ಕೊಪ್ಪಳದ ಗಂಗಾವತಿ ತಾಲೂಕು ವಿದ್ಯಾನಗರದ ವೈ.ಜೆ.ಆರ್​. ಪಿಯು ಕಾಲೇಜಿನ ನಿರ್ದೇಶಕರು ಹಲ್ಲೆಗೊಳಗಾಗಿದ್ದಾರೆ. ವೈ.ಜೆ.ಆರ್.ಪಿಯು ಕಾಲೇಜಿನಲ್ಲಿ ಪಿ.ಯು.ಸಿ.ಎಕ್ಸಾಮ್ ನಡೆಯುತ್ತಿತ್ತು. ಈ ಕೇಂದ್ರದಲ್ಲಿ ವಿದ್ಯಾನಿಕೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು.

ಈ ವಿದ್ಯಾರ್ಥಿಗಳು ಯಾವುದೇ ರೀತಿ ಕಾಪಿ ನಡೆಸದಂತೆ ವೈ ಜೆ ಆರ್ ಪಿ ಯು ಕಾಲೇಜಿನ ಸಿಬ್ಬಂದಿ ಕಟ್ಟುನಿಟ್ಟಾಗಿ ನೋಡಿಕೊಂಡಿದ್ದರು. ಇದರಿಂದಕೆರಳಿ ವಿದ್ಯಾನಿಕೇತನ ಶಾಲೆಯ ಪ್ರಿನ್ಸಿಪಾಲ್​ ಶರತ್​ ಚಂದ್ರ ಹಾಗೂ ಸಿಬ್ಬಂದಿ ಸೇರಿ ನಿದೇರ್ಶಕ ರಾಮಕೃಷ್ಣ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ರಾಮಕೃಷ್ಣ ತಲೆಗೆ ಗಾಯವಾಗಿದ್ದು ತಾಲೂಕ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕರೇ ತಮ್ಮ ಶಾಲೆಯ ಮಕ್ಕಳು ಕಾಪಿ ಮಾಡಲು ಪ್ರೇರೇಪಣೆ ನೀಡಿ, ಅವಕಾಶ ನೀಡದ್ದಕ್ಕೇ ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿದ್ದು, ಮಾತ್ರ ಖಂಡನೀಯವೇ ಸರಿ.