ಯುಪಿ ಸಿಎಂ ಹಾಗೂ ಬಿಎಸ್​ಪಿ ನಾಯಕಿಗೆ ಆಯೋಗ ಶಾಕ್​​! ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ!!

2019ರ ಲೋಕಾಸಭಾ ಚುನಾವಣೆ ಪ್ರಚಾರ ಅಂತಿಮ ಘಟಕ್ಕೆ ಬಂದು ತಲುಪಿದ್ದು, ದೇಶದಾದ್ಯಂತ ಎಲ್ಲ ಪಕ್ಷದ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.  ಆದರೆ ಕೋಮುಭಾವನೆ ಕೆರಳಿದ ಆರೋಪದ ಮೇರೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹಾಗೂ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಪ್ರಚಾರ ಮಾಡುವ ಹಕ್ಕು ಕಳೆದುಕೊಂಡಿದ್ದಾರೆ. ಈ ಇಬ್ಬರೂ ನಾಯಕರಿಗೂ ಶಾಕ್​ ನೀಡಿರುವ ಆಯೋಗ,  ಯೋಗಿ ಆದಿತ್ಯನಾಥ್ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪ್ರಚಾರಕ್ಕೆ ನಿರ್ಬಂಧ ಹೇರಿದೆ.

ಹೌದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​  ಹಾಗೂ ಬಿಎಸ್​ಪಿ ನಾಯಕಿ ಮಾಯಾವತಿಗೆ ಚುನಾವಣಾ ಆಯೋಗ ಬಿಗ್​ ಶಾಕ್​ ನೀಡಿದೆ. ಯೋಗಿಗೆ 72 ಗಂಟೆಗಳ ಕಾಲ  ಹಾಗೂ ಮಾಯಾವತಿ 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿಷೇಧ ಹೇರಿದೆ. ಕೋಮು ಪ್ರಚೋದನಾ ಭಾಷಣ ಮಾಡಿದ ಹಿನ್ನೆಲೆ ಎರಡು ದಿನಗಳ ಕಾಲ ಪ್ರಚಾರಕ್ಕೆ ಬ್ರೇಕ್​ ಹಾಕಲಾಗಿದೆ.ನಾಳೆ ಬೆಳಗ್ಗೆ 6ರಿಂದ ಸೂಚನೆ ಜಾರಿಗೆ ಬರಲಿದೆ.ಮುಸ್ಲಿಮರಿಗೆ ಮತ ಹಾಕಿ ಎಂದು ಹೇಳಿರುವ ಕಾರಣಕ್ಕೆ ಮಾಯಾವತಿಗೆ ಹಾಗೂ ಅಲಿ, ಭಜರಂಗ ಬಲಿ ಕುರಿತ ಹೇಳಿಕೆಗೆ ಯೋಗಿ ಆದಿತ್ಯನಾಥ್‌ಗೆ ನೋಟಿಸ್ ನೀಡಲಾಗಿದೆ.

ಇನ್ನು ಭಜರಂಗಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದರು.ರಾಮಾಯಣದ ಭಜರಂಗಬಲಿ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಯನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವ ಮಾಯಾವತಿ, ಭಜರಂಗಬಲಿಯನ್ನು ನನ್ನ ಸ್ವಂತ ದಲಿತ ಸಮುದಾಯಕ್ಕೆ ತಳುಕುಹಾಕಲಾಗಿದೆ. ಆದ್ದರಿಂದ ಜರಂಗಬಲಿ ನಮ್ಮವನೇ ಆಗಿದ್ದಾನೆ ಎಂದು ಹೇಳಿದ್ದಾರೆ.

 

ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಲಿ (ಮುಸ್ಲಿಂ ಸಮುದಾಯದ ಮತಗಳು) ಬಿಎಸ್ ಪಿ-ಸಮಾಜವಾದಿ ಪಕ್ಷ- ಆರ್ ಎಲ್ ಡಿ ಜೊತೆ ಇದ್ದರೆ, ಬಜರಂಗಬಲಿ (ಹಿಂದೂ ಸಮುದಾಯದ ಮತಗಳು) ಭಾರತೀಯ ಜನತಾ ಪಕ್ಷದೊಂದಿಗೆ ಇದೆ ಎಂದು ಹೇಳಿದ್ದರು. ಈ ಇಬ್ಬರ ಹೇಳಿಕೆಗಳು ಕೋಮು ಭಾವನೆಯನ್ನು ಕೆರಳಿಸುವಂತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಚುನಾವಣಾ ಆಯೋಗ ಇಬ್ಬರು ರಾಜಕೀಯ ನಾಯಕರ ಭಾಷಣಕ್ಕೆ ಬ್ರೇಕ್​ ಹೇರಿದ್ದು,  ಸಿಎಂ ಯೋಗಿ ಆದಿತ್ಯನಾಥ ಹಾಗೂ ಮಾಯಾವತಿಗೆ ತೀವ್ರ ಮುಖಭಂಗವಾದಂತಾಗಿದೆ.