ಸಲಗ ಶೂಟಿಂಗ್ ಸ್ಪಾಟ್​ಗೆ ಕಂಪ್ಲಿ ಶಾಸಕ ಗಣೇಶ್ ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್​ ಕುಮಾರ್​ ಭೇಟಿ !!

ಸ್ಯಾಂಡಲ್​ವುಡ್​ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳಿ ಅಭಿನಯಿಸ್ತಿರೋ ಸಲಗ ಸಿನಿಮಾ ಒಂದಲ್ಲ ಒಂದು ಸುದ್ದಿಯಿಂದ ಸೌಂಡ್ ಮಾಡ್ತಾನೆ ಇದೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ಮಾಜಿಸಿಎಂ ಸಿದ್ಧರಾಮಯ್ಯ ಆಗಮಿಸಿ ಶುಭಹಾರೈಸಿದ ಬೆನ್ನಲ್ಲೇ ಇದೀಗ  ಸಲಗ ಶೂಟಿಂಗ್ ಸ್ಪಾಟ್​ಗೆ ಕಂಪ್ಲಿ ಶಾಸಕ ಗಣೇಶ್ ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್​ ಕುಮಾರ್​ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ad

ಇತ್ತೀಚೆಗೆ ಸಲಗ ಮೂಹರ್ತ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಮಾಜಿ ಸಿಎಂ ಸಿದ್ದರಾಮಯ್ಯ ದುನಿಯಾ ವಿಜಯ್​ಗೆ ಸಾಥ್ ಕೊಟ್ಟಿದ್ರು. ಇದೀಗ ಸಲಗ ಶೂಟಿಂಗ್ ಸ್ಪಾಟ್​ಗೆ ಕಂಪ್ಲಿ ಶಾಸಕ ಗಣೇಶ್ ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್​ ಕುಮಾರ್​ ಭೇಟಿ ಕೊಟಿದ್ದು. ಚಿತ್ರೀಕರಣ ವೀಕ್ಷಿಸಿ ಸಲಗ ತಂಡಕ್ಕೆ ಶುಭಹಾರೈಸಿದ್ದಾರೆ. 

ಈ ವಿಡಿಯೋ ಹಾಗೂ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.  ಇನ್ನು ನಟ ಶಿವಣ್ಣ ಅವರು  ‘ಸಲಗ’ ಚಿತ್ರದ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿ ಅಲ್ಲಿದ್ದ ಎಲ್ಲರಿಗೂ ಖುಷಿ ನೀಡಿದ್ದು ಮಾತ್ರವಲ್ಲ, ಅವರೂ ಸಹ ಸಖತ್ ಖುಷಿಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಬ್ಲಾಕ್ ಕೋಬ್ರಾಗೆ ದೊಡ್ಡ ನಾಯಕ ಬೆಂಬಲ ದೊರೆಯುತ್ತಿರೋದಕ್ಕೆ ವಿಜಯ್ ಸಂತಸ ವ್ಯಕ್ತಪಡಿಸಿದ್ದಾರೆ.