ಸಿಡಿ ಪ್ರಕರಣದ ಸೃಷ್ಟಿಕೃರ್ತ ರಾಮಮೂರ್ತಿ ಗೌಡ್ ವಿರುದ್ದ ದೂರು!!

ಕೆಲದಿನಗಳ ಹಿಂದೆ ಬಿಡುಗಡೆಯಾಗಿದ್ದ ಪ್ರೆಸ್​​ನೋಟೊಂದು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ರಾಜ್ಯದ ಪ್ರಮುಖ ಕಾಂಗ್ರೆಸ್​ ನಾಯಕರೊಬ್ಬರ ರಾಸಲೀಲೆಯನ್ನು ಬಿಡುಗಡೆ ಮಾಡುವುದಾಗಿ ಪ್ರೆಸ್​​ ನೋಟ್​ ಬಿಡುಗಡೆಯಾಗಿದ್ದರಿಂದ ರಾಜ್ಯದ ಜನರು ಕಾತುರದಿಂದ ಕಾಯುತ್ತಿದ್ದರು.

ಆದರೇ ಧೀಡಿರ ಈ ಪ್ರೆಸ್ಮಿಟ್​​​ ಕ್ಯಾನ್ಸಲ್ ಆಗುವ ಮೂಲಕ ಹಲವು ಅನುಮಾನ ಮೂಡಿಸಿತ್ತು. ಇದೀಗ ಈ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್​ ಸಿಕ್ಕಿದ್ದು, ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ರಾಮಮೂರ್ತಿ ಗೌಡ್​ ವಿರುದ್ಧ ದೂರು ದಾಖಲಾಗಿದೆ. ಹೌದು ರಾಜ್ಯವೇ ಬೆಚ್ಚಿಬೀಳುವ ರಾಸಲೀಲೆ ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಆರ್​.ಟಿ.ಐ ಕಾರ್ಯಕರ್ತ ರಾಮಮೂರ್ತಿ ಗೌಡ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲರಾಗಿರುವ ನಟರಾಜ ಶರ್ಮ್​ ರಾಮಮೂರ್ತಿ ವಿರುದ್ಧ ದೂರು ನೀಡಿದ್ದಾರೆ. ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಪ್ರೆಸ್​ ನೋಟ್​​ನಲ್ಲಿ ತಮ್ಮ ಹೆಸರನ್ನು ತಮ್ಮ ಅನುಮತಿ ಇಲ್ಲದೇ ಹಾಕಲಾಗಿದೆ.

ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನನ್ನ ಹೆಸರನ್ನು ಬಳಸಿಕೊಂಡು ಯಾರನ್ನೋ ವಂಚಿಸುವ ಪ್ರಯತ್ನವನ್ನು ರಾಮಮೂರ್ತಿ ಗೌಡ್ ಮಾಡಿದ್ದಾರೆ. ಯಾವುದೋ ದುರುದ್ದೇಶದಿಂದಲೇ ನನ್ನ ಹೆಸರನ್ನು ಬಳಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ರಾಮಮೂರ್ತಿ ಗೌಡ್​ರನ್ನು ಸಂಪರ್ಕಿಸಿದಾಗ ಕೂಡ ಅವರು ತನಗೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ನಟರಾಜ್ ಶರ್ಮ್ ಆಗ್ರಹಿಸಿದ್ದಾರೆ.