ಸಿ ಎಸ್ ದ್ವಾರಕಾನಾಥ್ ಶೋಭಾ ಕರಂದ್ಲಾಜೆ ವಾಗ್ದಾಳಿ. ಗಣೇಶ್ ಶೆಟ್ಟಿಯವರಿಂದ ದೂರು.

ಶ್ರೀರಾಮನ ಅಸ್ತಿತ್ವದ ಬಗ್ಗೆ ನೂರೆಂಟು ಪ್ರಶ್ನೆ ಹುಟ್ಟು ಹಾಕುತ್ತೆ . ಒಬ್ಬರು 9 ಲಕ್ಷ ವರ್ಷದ ಹಿಂದೆ ರಾಮ ಇದ್ದ ಎನ್ನುತ್ತಾರೆ. ಇನ್ನೊಬ್ಬರು 7,500 ವರ್ಷದ ಹಿಂದೆ ಇದ್ದ ಎಂದು ಹೇಳುತ್ತಾರೆ. ಪೈಗಂಬರ್,ಏಸು,ಬುದ್ಧನ​ ಕಾಲಘಟ್ಟದ ಬಗ್ಗೆ ದಾಖಲೆ ಇವೆ. ಶ್ರೀರಾಮನ ಅಸ್ತಿತ್ವದ ಬಗ್ಗೆ ಯಾವ ದಾಖಲೆಗಳೂ ಇಲ್ಲ ಅನ್ನೋ ಸಿ ಎಸ್ ದ್ವಾರಕಾನಾಥ್​ ವಿರುಧ್ದ ಬಿಜೆಪಿ ಸಂಸದೆ ಶೋಭಾ ವಾಗ್ದಾಳಿ ನಡೆಸಿದ್ದಾರೆ. ಅವರು ಎಷ್ಟು ಪುರಾಣ ಓದಿದ್ದಾರೋ ಗೊತ್ತಿಲ್ಲ. ದ್ವಾರಕಾನಾಥ್ ಹೇಳಿಕೆ ದೇಶಕ್ಕೆ ಮಾಡೋ ಘೋರ ಅಪಮಾನ ಎಂದಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಿಂದು ಸಂಘಟನೆ ಮುಖಂಡ ಗಣೇಶ್ ಶೆಟ್ಟಿಯವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದ್ವಾರಕನಾಥ್ ವಿರುದ್ಧ ದೂರು ನೀಡಲಾಗಿದೆ. ಕೋಮು ಪ್ರಚೋದನೆ ನೀಡಿದ ಆರೋಪದಡಿ ದೂರು ದಾಖಲು.