ಚಾಲಕನಿಗೆ ಕೊಡೆ ಹಿಡಿದ ಕಂಡಕ್ಟರ್- ಈ ಬಸ್ ಒಳಗೂ ಸುರಿಯುತ್ತೆ ಮಳೆ!

ಕರ್ನಾಟಕ ಸಾರಿಗೆ ತನ್ನ ಅವ್ಯವಸ್ಥೆಗಳಿಂದಲೇ ಸುದ್ದಿ ಮಾಡೋದು ಸಾಮಾನ್ಯ ಸಂಗತಿ. ಆದರೇ ಈ ಭಾರಿ ಮಾತ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್​​ನ ಅವಾಂತರ ಸಖತ್ ವೈರಲ್​ ಆಗಿದ್ದು, ಸೋರುತ್ತಿರುವುದು ಸಾರಿಗೆ ಬಸ್​ ಮಾಳಿಗೆ ಎಂಬಂತಾಗಿದೆ.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ವೊಂದು ಮಳೆಯಲ್ಲಿ ಸೋರುತ್ತಿದ್ದು, ಬಸ್​ ಕಂಡಕ್ಟರ್​ ಚಾಲಕನನ್ನು ಮಳೆಯಿಂದ ರಕ್ಷಿಸಲು ಕೊಡೆ ಹಿಡಿದಿದ್ದಾರೆ. ಈ ದೃಶ್ಯ ಇದೀಗ ಸಖತ್ ವೈರಲ್​ ಆಗಿದ್ದು, ಸಾರಿಗೆ ಬಸ್​ಗಳ ಗುಣಮಟ್ಟದ ಕುರಿತು ಸಾಕಷ್ಟು ಟೀಕೆ ವ್ಯಕ್ತವಾಗಿದೆ.

 

ಹುಬ್ಬಳ್ಳಿ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ಹೋಗುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಬಸ್ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಈ ಹಿಂದೆಯೂ ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸೋ ಬಸ್ ನಲ್ಲಿ ಪ್ರಯಾಣಿಕರು ಕೊಡೆ ಹಿಡಿದು ಪ್ರಯಾಣ ಬೆಳೆಸಿದ್ದರು.ಮಳೆಯ ಹಿನ್ನೆಲೆ ಬಸ್ ಸೋರುತ್ತಿದ್ದ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿತ್ತು.
ಈಗ ಮತ್ತೆ ಅದೇ ರೀತಿಯಲ್ಲಿ ಬಸ್ ನಲ್ಲಿ ಕೊಡೆ ಹಿಡಿದು ಚಾಲನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಸರ್ಕಾರಿ ಬಸ್ ಅವ್ಯವಸ್ಥೆಯನ್ನು ಸಾರಿ ಹೇಳುವಂತಿದೆ. ಇನ್ನಾದರೂ ಸಾರಿಗೆ ಸಚಿವರು ಪ್ರಯಾಣಿಕರ ರಕ್ಷಣೆ ಉದ್ದೇಶದಿಂದಲಾದ್ರೂ ಈ ಬಸ್​ಗಳಿಗೆ ಮುಕ್ತಿ ಕೊಡ್ತಾರಾ ಕಾದುನೋಡಬೇಕಿದೆ.