ಚಂದ್ರಶೇಖರ್​​ ಗುರೂಜಿ ಬಿಜೆಪಿ ಸೇರ್ಪಡೆಗೆ ನಿಗದಿಯಾಯ್ತಾ? ಮುಹೂರ್ತ.!!

ಕರ್ನಾಟಕದ ಚುನಾವಣಾ ಕಣದಲ್ಲಿ ಕನ್ನಡದ ಖ್ಯಾತ ಜ್ಯೋತಿಷಿ ಚಂದ್ರಶೇಖರ್​ ಗುರೂಜಿ ಅದೃಷ್ಟ ಪರೀಕ್ಷೆಗೆ ಮುಂದಾಗಿರೋದು, ಅದರ ಪೂರ್ವಭಾವಿಯಾಗಿ ಅವರು ಬಿಜೆಪಿ ಸೇರ್ಪಡೆಯಾಗುತ್ತಿರುವ ಸಂಗತಿ ಇತ್ತೀಚಿಗಷ್ಟೇ ಸುದ್ದಿಯಾಗಿತ್ತು.

ಬಿಟಿವಿನ್ಯೂಸ್​ ಎಕ್ಸಕ್ಲೂಸಿವ್​ ಆಗಿ ಈ ಸುದ್ದಿ ಬಿತ್ತರಿಸಿತ್ತು. ಇದೀಗ ಈ ವಿಚಾರ ಸತ್ಯ ಎಂಬುದು ಸಾಬೀತಾಗಿದ್ದು, ಸ್ವಾಮೀಜಿ ರಾಜಕೀಯ ಸೇರ್ಪಡೆ ಕುರಿತು ಅಭಿಮಾನಿಗಳ ಅಭಿಪ್ರಾಯ ಸಂಗ್ರಹಕ್ಕೆ ವೇದಿಕೆ ಸಿದ್ಧವಾಗಿದೆ. ಬೆಂಗಳೂರಿನ ಆರ್.ಟಿ.ನಗರದಲ್ಲಿ ವಾಸವಾಗಿರುವ ಚಂದ್ರಶೇಖರ್ ಗುರೂಜಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮೂಡಬಿದಿರೆಯವರು. ಹೀಗಾಗಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮೂಡಬಿದಿರೆ ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ನಡೆದಿತ್ತು.

 

ಈ ಹಿನ್ನೆಲೆಯಲ್ಲಿ ಮೂಲ್ಕಿ- ಮೂಡಬಿದರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸ್ವಾಮೀಜಿಯನ್ನು ಮನವೊಲಿಸಲಾಗುತ್ತಿದೆ. ಅಲ್ಲದೇ ಈ ಕುರಿತು ಕ್ಷೇತ್ರದಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸಲು ಸ್ವಾಮೀಜಿಯ ಅಭಿಮಾನಿ ಬಳಗ ಸಿದ್ದವಾಗಿದೆ. ಮಾರ್ಚ್​ 27ರಂದು ಮೂಲ್ಕೆಯಲ್ಲಿನ ಶ್ರೀ ಚಂದ್ರಶೇಖರ್​​ ಸ್ವಾಮೀಜಿ ಆಶ್ರಮದಲ್ಲಿ ಸಭೆ ನಿಗಧಿ ಮಾಡಲಾಗಿದ್ದು, ಜನರು ಹಾಗೂ ಅಭಿಮಾನಿಗಳ ಅಭಿಪ್ರಾಯ ಆಧರಿಸಿ ಸ್ವಾಮೀಜಿ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗುತಗತಿದೆ. ಈಗಾಗಲೇ ಸ್ವಾಮೀಜಿ ಜೊತೆ ಮಾತನಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ಸೇರುವಂತೆ ಆಹ್ವಾನಿಸಿದ್ದಾರೆ. ಅಲ್ಲದೇ ಚಂದ್ರಶೇಖರ್ ಸ್ವಾಮೀಜಿ, ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here