ಬೆಂ. ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್​ ನಾಮಪತ್ರ ಸಲ್ಲಿಕೆ!!!

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಇಂದು ಎಐಸಿಸಿ ಮುಖಂಡ ಬಿ.ಕೆ. ಹರಿಪ್ರಸಾದ್​ ನಾಮಪತ್ರ ಸಲ್ಲಿಸಲಿದ್ದಾರೆ. ಹೈಕಮಾಂಡ್​ ನಾಯಕರ ಜತೆ ನಿಕಟ ನಂಟು ಹೊಂದಿರೋ ಹರಿಪ್ರಸಾದ್ ಅವರು, ರಾಜ್ಯದ ಹಿಂದುಳಿದ ಸಮುದಾಯದ ಪ್ರಭಾವಿ ಮುಖಂಡರೂ ಹೌದು.

ad

 

ಹೀಗಾಗಿ ಅಳೆದೂ ತೂಗಿ ಕಾಂಗ್ರೆಸ್​ ಹೈಕಮಾಂಡ್​ ಹರಿ ಪ್ರಸಾದ್​ಗೆ ಟಿಕೆಟ್ ಕೊಟ್ಟಿದೆ. ಅಲ್ಲದೇ ಜೆಡಿಎಸ್​ ಸಾಥ್​​ ಕೊಡ್ತಿರೋದು ಕಾಂಗ್ರೆಸ್​ಗೆ ಅವಕಾಶಗಳನ್ನು ಹೆಚ್ಚಿಸಿದೆ. ಹರಿಪ್ರಸಾದ್ ನಾಮಪತ್ರ ಸಲ್ಲಿಕೆ ವೇಳೆ ಘಟಾನುಘಟಿ ಮೈತ್ರಿ ನಾಯಕರುಗಳು ಸಾಥ್ ನೀಡಲಿದ್ದಾರೆ.