ಕಾಂಗ್ರೆಸ್​ ಕಾರ್ಪೋರೇಟರ್​ ದೌರ್ಜನ್ಯ- ಜೆಡಿಎಸ್​ ಕಾರ್ಯಕರ್ತನ ಮೇಲೆ ಹಲ್ಲೆ!

 

adಜೆಡಿಎಸ್​ ಕಾರ್ಯಕರ್ತನ ಮೇಲೆ ರಾಜಕೀಯ ದ್ವೇಷದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಶ್ವಂತಪುರದಲ್ಲಿ ದೇವರಾಜು ಎಂಬ ಜೆಡಿಎಸ್​ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು, ಜೆಡಿಎಸ್​ ಪರ ಪ್ರಚಾರ ಮಾಡಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಶಂಕಿಸಲಾಗಿದೆ.

 

ಇತ್ತೀಚಿಗೆ ದೇವರಾಜು ಕಾಂಗ್ರೆಸ್ ತೊರೆದು ಜೆಡಿಎಸ್​ ಸೇರ್ಪಡೆಯಾಗಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ ದೊಡ್ಡಬಿದರಕಲ್ಲು ಕಾಂಗ್ರೆಸ್​ ಕಾರ್ಪೋರೇಟರ್​ ವಾಸು ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ವಾಸು ಕಾರ್ಯಕರ್ತ ದೇವರಾಜ್ ಗೆ ನನ್ನ ವಿರುದ್ಧವೇ ನಿಂತು ಪ್ರಚಾರ ಮಾಡ್ತಿಯಾ? ಅಷ್ಟು ಧೈರ್ಯ ಬಂತಾ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಹಲ್ಲೆಗೊಳಗಾದ ದೇವರಾಜುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಾಸು ವಿರುದ್ಧ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.