ಸಚಿವ ದೇಶಪಾಂಡೆ ಕೊರಳಪಟ್ಟಿ ಹಿಡಿದ್ರೆ **ಕ ಮುಚ್ಕೊಂಡು ಹಣ ಬಿಡುಗಡೆ ಮಾಡ್ತಾರೆ !! ಕಾಂಗ್ರೆಸ್ ಮುಖಂಡನ ವಿಡಿಯೋ ವೈರಲ್ !!

ಚುನಾವಣೆ ಬರ್ತಿದಂತೆ ರಾಜಕೀಯ ನಾಯಕರು, ಮುಖಂಡರು, ಟಿಕೇಟ್​ ಆಕಾಂಕ್ಷಿಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡೋದು ಸಾಮಾನ್ಯವಾದ ಸಂಗತಿ. ಆದರೇ ಇಲ್ಲಿ ಕಾಂಗ್ರೆಸ್ ನಾಯಕರೊಬ್ಬರು ತಮ್ಮದೇ ಪಕ್ಷದ ಸಚಿವರ ವಿರುದ್ಧ ಕೀಳುಮಟ್ಟದಲ್ಲಿ ಟೀಕೆ ಮಾಡಿ ಸುದ್ದಿಯಾಗಿದ್ದಾರೆ.

ಹೌದು ಭದ್ರಾವತಿಯ ಮಾಜಿ ಶಾಸಕ ಹಾಗೂ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಬಿ.ಕೆ.ಸಂಗಮೇಶ್ವರ್ ಹೀಗೆ ಕೀಳುಮಟ್ಟದ ಬೈಗುಳದ ಮೂಲಕ ಸುದ್ದಿಯಾದವರು. ಬಿ.ಕೆ.ಸಂಗಮೇಶ್ವರ್ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಕೀಳು ಮಟ್ಟದ ಪದಗಳನ್ನು ಬಳಸಿ ಬೈದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಈ ಒಳಜಗಳ ನೋಡಿ ಆನಂದಿಸುತ್ತಿದ್ದಾರೆ.  ಭದ್ರಾವತಿಯ ಎಂಪಿಎಂ ಕಾರ್ಖಾನೆ ಕಾರ್ಮಿಕರಿಗೆ ಬರಬೇಕಾದ ವಿಆರ್​ಎಸ್ ಪ್ಯಾಕೇಜ್ ಹಣ ಬರಬೇಕಿತ್ತು. ಈ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಂಗಮೇಶ್ವರ್ ಅವರು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ್ದಾರೆ.

ವಾಗ್ದಾಳಿ ನಡೆಸಿರುವ ಸಂಗಮೇಶ್ವರ್, ಇವರಿಗೆ ಹೇಳುವವರಿಲ್ಲ. ಕೇಳುವವರಿಲ್ಲ. ಕೊರಳಪಟ್ಟಿ ಹಿಡಿದು ಕೆಲಸ ಮಾಡಿಸುವವರು ಇರಲಿಲ್ಲ. ಅದಕ್ಕಾಗಿ ನಾನು ದೇಶಪಾಂಡೆ ಕೊರಳಪಟ್ಟಿ ಹಿಡಿದು ಕೇಳಿದ ಮೇಲೆ ಎಂಪಿಎಂಗೆ ಬರಬೇಕಾದ 392 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದಿದ್ದಾರೆ. ಇನ್ನು ಕಾಂಗ್ರೆಸ್ ಟಿಕೆಟ್ ಸಿಕ್ಕೇ ಸಿಗುತ್ತೆ ಅನ್ನೋ ಉತ್ಸಾಹದಲ್ಲಿರುವ ಮಾಜಿ ಶಾಸಕರಿಗೆ ಈ ವಿಡಿಯೋ ಮುಳುವಾಗಿ ಪರಿಣಮಿಸಿದ್ದು, ಸ್ವಪಕ್ಷಿಯರನ್ನೇ ನಿಂದಿಸಿರೋ ಈ ವಿಡಿಯೋ ಇದೀಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Avail Great Discounts on Amazon Today click here