ರಾಹುಲ್ ಗಾಂಧಿಯಿಂದ ಹಿಂದುತ್ವ ರಾಜಕಾರಣ !! ಶಿವಭಕ್ತನ “ಕೈ” ಹಿಡಿಯುತ್ತಾ ಮಠ ದೇಗುಲಗಳು ? !

ಗುಜರಾತ್ ಚುನಾವಣೆಯ ಸಂಧರ್ಭ ದೇಗುಲಕ್ಕೆ ಬೇಟಿ ನೀಡಿದ್ದ ರಾಹುಲ್ ಗಾಂಧಿಯ ಧರ್ಮದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕದಲ್ಲಿ ದೇವಸ್ಥಾನ ಬೇಟಿಯ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ನಾನೊಬ್ಬ ಶಿವಭಕ್ತ ಎಂದು ಹೇಳಿಕೊಳ್ಳುತ್ತಿರುವ ರಾಹುಲ್ ಗಾಂಧಿ ಜನವರಿ 21 ರಿಂದ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ದೇಗುಲ ಯಾತ್ರೆ ಮಾಡಲಿದ್ದಾರೆ. ಬಿಜೆಪಿಯ ಹಿಂದುತ್ವ ಅಜೆಂಡಾಗೆ ಸಡ್ಡು ಹೊಡೆಯಲು ಕಾಂಗ್ರೆಸ್​ ತಂತ್ರಗಾರಿಕೆ ನಡೆಸುತ್ತಿದೆ. ಹಿಂದೂ ಮತ ಸೆಳೆಯಲು ಕಾಂಗ್ರೆಸ್​ ಮಾಸ್ಟರ್ ಪ್ಲಾನ್ ಮಾಡಿದ್ದು ಜನವರಿ 21ಕ್ಕೆ ರಾಜ್ಯಕ್ಕೆ ಭೇಟಿ ನೀಡಲಿರೋ ರಾಹುಲ್​​ ಗಾಂಧಿ ಹಿಂದೂ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ.

 

 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಭೇಟಿ ಬೆನ್ನಲ್ಲೇ ಕಾಂಗ್ರೆಸ್​ ಈ ರಣತಂತ್ರ ಹೆಣೆದಿದೆ.​ ಶೃಂಗೇರಿ ಮಠಕ್ಕೆ ಭೇಟಿ ಕೊಡಲಿರುವ ರಾಹುಲ್​​, ಅಜ್ಜಿ ಇಂದಿರಾ,ತಂದೆ ರಾಜೀವ್​ ಗಾಂಧಿ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಶೃಂಗೇರಿ ಅಲ್ಲದೇ ವಿವಿಧ ಮಠಗಳು, ಚರ್ಚ್ ಹಾಗೂ ಮಸೀದಿಗಳಿಗೂ ತೆರಳಲು ರಾಹುಲ್​​ ಪ್ಲಾನ್ ಮಾಡಿದ್ದಾರೆ. ಜನವರಿ 21ರಿಂದ 3 ದಿನ ರಾಜ್ಯದಲ್ಲಿ ಬೀಡು ಬಿಟ್ಟು ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್​ ಭಾಗಿಯಾಗಲಿದ್ದಾರೆ.

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here