ಶಿಸ್ತಿನ ಪಕ್ಷದಲ್ಲಿ ಅಸಮಾಧಾನ ಸ್ಫೋಟ… ಸಿ ಎಂ ನಿಂಬಣ್ಣವರ ಬೆಂಬಲಿಗರಿಂದ ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ.. ತಂದೆ ಮಗನ ಜಗಳ ಶಮನ ಮಾಡುತ್ತೇವೆ ಬಿಜೆಪಿ ಅಭ್ಯರ್ಥಿ ಮಹೇಶ ತೆಂಗಿನಕಾಯಿ ಅಭಯ….

ಬಿಜೆಪಿಯ ಎರಡನೇಯ ಪಟ್ಟಿ ಬಿಡುಗಡೆ ಯಾಗುತ್ತಿದ್ದಂತೆ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಡೇ ಹರ್ಷೋದಾರ ಇನ್ನೊಂದೆಡೆ ಪ್ರತಿಭಟನೆ ಬಿಸಿ, ಒಗ್ಗಟ್ಟಿನ ಪಕ್ಷದಲ್ಲಿ ಬಿನ್ನಮತ ಸ್ಫೋಟಗೊಂಡಿದೆ.

ad


ಕಲಘಟಗಿ ಕ್ಷೇತ್ರಕ್ಕೆ ಮಹೇಶ ತೆಂಗಿನಕಾಯಿ ಅವರಿಗೆ ಟಿಕೇಟ್ ಕನ್ಪರ್ಮ ಆಗುತ್ತಿದ್ದಂತೆ, ಕಲಘಟಗಿಯಲ್ಲಿ ಸಿ ಎಂ ನಿಂಬಣ್ಣವರ ಬೆಂಬಲಿಗರು ರಸ್ತೆ ತಡೆದು ಟೈಯರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡೆಸಿದ್ದಾರೆ. ಇನ್ನೂ ಮಹೇಶ ತೆಂಗಿನಕಾಯಿ ಅವರಿಗೆ ಟಿಕೇಟ್ ಕನ್ಪರ್ಮ ಆಗುತ್ತಿದಂತೆ ಮಹೇಶ ತೆಂಗಿನಕಾಯಿ ಬೆಂಬಲಿಗರು ಜಯ ಘೋಷಣೆ ಕೂಗಿ ಹರ್ಷೋದಾರ ವ್ಯಕ್ತಪಡೆಸಿದ್ದಾರೆ.

ಇನ್ನೂ ಬಿಟಿವಿಯೊಂದಿಗೆ ಮಾತನಾಡಿದ ಮಹೇಶ ತೆಂಗಿನಕಾಯಿ ಸಿ ಎಂ ನಿಂಬಣ್ಣವರ ನನಗೆ ತಂದೆ ಇದ್ದ ಹಾಗೇ ತಂದೆ ಮಗನ ಜಗಳ ಸಹಜ ಅವರನ್ನು ನಾನು ಹಾಗೂ ನಮ್ಮ ನಾಯಕರಾದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಲ್ಹಾದ ಜೋಶಿ ಹೋಗಿ ಮಾತನಾಡುತ್ತೇವೆ. ಸಿಎಂ ನಿಂಬಣ್ಣವರನ್ನು ಮುಂದೆ ಇಟ್ಟುಕೊಂಡು ಚುನಾವಣಾ ಮಾಡೋದಾಗಿ ಹೇಳ್ತಾರೆ ಇನ್ನೂ ಬಿಜೆಪಿಯ ತಳಮಟ್ಟದ ಕಾರ್ಯಕರ್ತನಾಗಿದ್ದ ನಾನಗೆ ಟಿಕೇಟ್ ಸಿಕ್ಕಿದ್ದು ಸಂತಸ ತಂದಿದೆ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಅಂದ್ರು.

ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ.