ಕೊನೆಗೂ ಬಿಟಿವಿ ಅಭಿಯಾನಕ್ಕೆ ಮಣಿದ ಸರ್ಕಾರ- ಭ್ರಷ್ಟ ಚೀಫ್ ಇಂಜೀನಿಯರ್ ಸ್ವಾಮಿ ಸಸ್ಪೆಂಡ್​!

ad

ಎಸಿಬಿ ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದ್ದ ಟಿ.ಆರ್.ಸ್ವಾಮಿ ವಿರುದ್ಧ ಕೊನೆಗೂ ಸರ್ಕಾರ ಕ್ರಮಕ್ಕೆ ಮುಂಧಾಗಿದೆ. ಕೆಐಡಿಬಿ ಚೀಫ್​ ಎಂಜಿನಿಯರ್​ ಅಧಿಕಾರಿ ಟಿ.ಆರ್.ಸ್ವಾಮಿಯನ್ನು ಅಮಾನತ್ತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಕೊನೆಗೂ ಬಿಟಿವಿಯ ಅಭಿಯಾನದ ಫಲಶೃತಿಯಾಗಿ ಟಿ.ಆರ್.ಸ್ವಾಮಿ ಮನೆ ಸೇರಿದ್ದಾನೆ.
ಇತ್ತೀಚಿಗಷ್ಟೇ ಭ್ರಷ್ಟ ಕೆಐಡಿಬಿ ಅಧಿಕಾರಿ ​​ ಟಿ.ಆರ್​​.ಸ್ವಾಮಿ ಮೇಲೆ ಎಸಿಬಿ ದಾಳಿ ನಡೆದಿತ್ತು. ಎಸಿಬಿ ದಾಳಿಯಲ್ಲಿ 4.5 ಕೋಟಿ ನಗದು ಸೇರಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗಿತ್ತು. ಆದರೂ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಈ ಮಧ್ಯೆ ಬಿಟಿವಿ ಭ್ರಷ್ಟ ಸ್ವಾಮಿಯನ್ನು ಅಮಾನತ್ತುಗೊಳಿಸುವಂತೆ ಅಭಿಯಾನ ಕೂಡ ನಡೆಸಿತ್ತು. ಎಲ್ಲ ಒತ್ತಡ ಮಣಿದ ಸರ್ಕಾರ ಕೊನೆಗೂ ಸ್ವಾಮಿಯನ್ನು ಅಮಾನತ್ತುಗೊಳಿಸಲಾಗಿದೆ. ಅಮಾನತ್ತುಗೊಳಿಸಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಆದೇಶ ಹೊರಡಿಸಿದ್ದಾರೆ.K

ಇನ್ನು ಈಗಾಗಲೇ ಎಸಿಬಿ ಪ್ರಕರಣ ಕೂಡ ದಾಖಲಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಸ್ವಾಮಿ ಬಂಧನವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಇಡಿ ಕೂಡ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಭ್ರಷ್ಟ ಸ್ವಾಮಿ ಸಂಕಷ್ಟ ಎದುರಾಗಿದೆ. ಇನ್ನು ಎಸಿಬಿ ಇಂತಹ ಇನ್ನಷ್ಟು ದಾಳಿಗಳನ್ನು ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ.