ಮೆಟ್ರೋ ಪ್ರಯಾಣಿಕರಿಗೆ ಶಾಕ್​! ಮೆಟ್ರೋದ ಎರಡು ಪಿಲ್ಲರ್​ನಲ್ಲಿ ಬಿರುಕು! ಸಂಚಾರ ಸ್ಥಗಿತ ಸಾಧ್ಯತೆ!!

ಬೆಂಗಳೂರಿನ ಸಹಸ್ರಾರು ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್​ ಎದುರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮೆಟ್ರೋ ಮಾರ್ಗವೊಂದರಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದ ಬೆನ್ನಲ್ಲೇ ಇಂದು ಮತ್ತೊಂದು ನಮ್ಮ ಮೆಟ್ರೋ ಪಿಲ್ಲರ್​ನಲ್ಲಿ ಬಿರುಕು ಕಾಣಿಸಿಕೊಂಡಿದೆ.

ad

ಜಯನಗರ ಸೌತ್​ ಎಂಡ್​ ಸರ್ಕಲ್​​​ನಲ್ಲಿರುವ ಮೆಟ್ರೋ ಪಿಲ್ಲರ್​ 66 ಮತ್ತು 67 ಪಿಲ್ಲರ್​ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೇವಲ ಒಂದರಲ್ಲಿ ಕಾಣಿಸಿಕೊಂಡ ಬಿರುಕನ್ನು ಸರಿಪಡಿಸದೇ ಬಿಟ್ಟಿದ್ದರಿಂದ ಹೀಗಾಗಿದೆ ಎನ್ನಲಾಗಿದೆ. ಇದರಿಂದ ಪ್ರಯಾಣಿಕರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ನಿರ್ಮಾಣಗೊಂಡ ನಮ್ಮ ಮೆಟ್ರೋ ಪಿಲ್ಲರ್ ನಲ್ಲಿ ಮತ್ತೊಮ್ಮೆ ಬಿರುಕು ಕಾಣಿಸಿಕೊಂಡಿರೋದು ಬಿಎಂಆರ್​ಸಿಎಲ್​ ಕಾರ್ಯವೈಖರಿ ವಿರುದ್ಧ ಟೀಕೆಗಳು ವ್ಯಕ್ತವಾಗಿದೆ.

ಆರು ತಿಂಗಳ ಹಿಂದೆ ಬೆಂಗಳೂರಿನ ಟ್ರಿನಿಟಿ ಸರ್ಕಲ್ ನ ಮೆಟ್ರೋ ಸ್ಟೇಷನ್ ನ ಪಿಲ್ಲರ್ ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದಕ್ಕೆ ಕಾರಣ ಕಳಪೆ ಕಾಮಗಾರಿ ಎಂಬ ಮಾತು ಕೇಳಿಬಂದಿತ್ತು. ಬಳಿಕ ಕೆಲದಿನಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳಿಸಿ ರಿಪೇರಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಸೌತ್​ಎಂಡ್​ ಮೆಟ್ರೋದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಈ ಬಿರುಕನ್ನು ಕೂಡ ಮೆಟ್ರೋ ಓಡಾಟ ಸ್ಥಗಿತಗೊಳಿಸಿ ದುರಸ್ಥಿಗೊಳಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜನರ ಬಹುನೀರಿಕ್ಷೆಯ ಮೆಟ್ರೋ ಕಾಮಗಾರಿಯಲ್ಲೂ ಕಳಪೆ ಕೆಲಸದ ವಾಸನೆ ದಟ್ಟವಾಗತೊಡಗಿದ್ದು, ಇದೇ ಕಾರಣಕ್ಕೆ ಮತ್ತೆ ಮತ್ತೆ ಬಿರುಕು ಎದುರಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.