“ಏರ್ ಶೋ ತಾಲೀಮಿನಲ್ಲಿ ಅವಘಡ”- ಪರಸ್ಪರ ಡಿಕ್ಕಿಯಾದ ಜೆಟ್

ನಾಳೆಯಿಂದ ಆರಂಭಗೊಳ್ಳಲಿರುವ ಏರೋ ಇಂಡಿಯಾ ಶೋ ನಲ್ಲಿ  ಅವಘಡ ಸಂಭವಿಸಿದೆ. ತಾಲೀಮು ನಡೆಸುತ್ತಿರುವ ಸಂದರ್ಭದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದಾಗಿ ವರದಿಯಾಗಿದೆ.

ಹೆಬ್ಬಾಳ ಬಳಿ ಸೂರ್ಯಕಿರಣ್​ ಜೆಟ್​ಗಳು ಪರಸ್ಪರ ಡಿಕ್ಕಿ ಹೊಡೆದಿದ್ದು ತಾಲೀಮು ನಡೆಸುತ್ತಿದ್ದ ವೇಳೆ  ಅವಘಡ ಸಂಭವಿಸಿದೆ.

ಸೂರ್ಯಕಿರಣ್​​​ನ ಇಬ್ಬರು ಪೈಲೆಟ್​ಗಳೂ ಸುರಕ್ಷಿತವಾಗಿರುವುದಾಗಿ ಅಧೀಕೃತ ಮೂಲಗಳಿಂದ ತಿಳಿದು ಬಂದಿದೆ.  ಸಂದೀಪ್​​ ಉನ್ನಿ ಕೃಷ್ಣನ್​​​​​​ ನಿವಾಸದ ಬಳಿಯೇ ಅವಘಡ ಸಂಭವಿಸಿದೆ.