ಶ್ರೀರಾಮನ ಅಸ್ತಿತ್ವಕ್ಕೆ ದಾಖಲೆಯೇ ಇಲ್ಲವಂತೆ!! ಏನಿದು ಹೊಸಾ ವಿವಾದ? ಈ ಸುದ್ದಿ ನೋಡಿ.

Rationalist CS Dwarakanath questioned the existence of Shree Rama.
Rationalist CS Dwarakanath questioned the existence of Shree Rama.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಶ್ರೀರಾಮನ ಅಸ್ತಿತ್ವದ ಬಗ್ಗೆ ವಿಚಾರವಾದಿ ಸಿ.ಎಸ್.ದ್ವಾರಕನಾಥ ಪ್ರಶ್ನೆ ಎತ್ತಿದ್ದಾರೆ. ಮಂಗಳೂರಿನ ಎಸ್.ಡಿ.ಪಿ.ಐ ಬಾಬರೀ ಮಸೀದಿ ಧ್ವಂಸ 25 ನೇ ವರ್ಷದ ವಿಚಾರ ಸಂಕಿರಣದಲ್ಲಿ ಮಾತನಾಡಿದ ದ್ವಾರಕಾನಾಥ್, ಶ್ರೀರಾಮಚಂದ್ರ ಇದ್ದ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎನ್ನುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.


ಶ್ರೀರಾಮ ಯಾವಾಗ ಬದುಕಿದ್ದ ಅನ್ನೋದನ್ನು ಪ್ರಶ್ನಿಸಿದರೇ, ಒಬ್ಬರು ಆತ ಏಳೂವರೆ ಸಾವಿರ ವರ್ಷದ ಹಿಂದೆ ಬದುಕಿದ್ದ ಎಂದರೇ, ಇನ್ನೊಬ್ಬರು ಒಂಬತ್ತೂವರೆ ಲಕ್ಷ ವರ್ಷದ ಹಿಂದೆ ಇದ್ದ ಎನ್ನುತ್ತಾರೆ. ಅಂದರೇ ಶ್ರೀರಾಮ ಏಳೂವರೆ ವರ್ಷದಿಂದ ಒಂಬತ್ತೂವರೆ ಲಕ್ಷ ವರ್ಷದ ಅವಧಿಯಲ್ಲಿ ಬದುಕಿದ್ದ ಎನ್ನಬಹುದು.

 

ಆದರೇ ಈ ನಾಡಿನಲ್ಲಿ ಬುದ್ಧ, ಪೈಗಂಬರ್, ಏಸುಕ್ರಿಸ್ತ್​ ಹುಟ್ಟಿದ್ದಕ್ಕೆ ದಾಖಲೆ ಇದೆ. ಆದರೇ ಶ್ರೀರಾಮನ ಬಗ್ಗೆ ದಾಖಲೆಗಳಲ್ಲಿ. ನನಗೆ ನನ್ನ ಅಪ್ಪ,ಅಜ್ಜ,ಮುತ್ತಜ್ಜ ಬಗ್ಗೆ ಗೊತ್ತು. ಅವರಜ್ಜನ ಬಗ್ಗೆ ಕೇಳಿದರೇ ನನಗೆ ಮಾಹಿತಿ ಇಲ್ಲ. ಅಂದ ಮೇಲೆ ಒಂಬತ್ತೂವರೆ ಲಕ್ಷ ವರ್ಷದ ಹಿಂದೆ ಮಾತನಾಡಿದರೇ ಹೇಗೆ ನಂಬಬೇಕು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದ್ದು, ಆಸ್ತಿಕರ ಹಾಗೂ ವಿವಿಧ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.


ದ್ವಾರಕಾನಾಥ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ನಾನು ದ್ವಾರಕನಾಥ್​ ಹೇಳಿಕೆ ಖಂಡಿಸುತ್ತೇನೆ. ಶ್ರೀರಾಮ ಬದುಕಿದ್ದ ಎನ್ನುವುದಕ್ಕೆ ಸಾವಿರಾರು ದಾಖಲೆಗಳಿವೆ. ರಾಮಾಯಣ ಗ್ರಂಥ ಇನ್ನು ಅಸ್ತಿತ್ವದಲ್ಲಿದೆ. ರಾಮಸೇತುವೆಯೂ ಇದೆ. ದ್ವಾರಕಾನಾಥ ಹೇಳಿಕೆ ವಾಲ್ಮೀಕಿಗೆ ಮಾಡುತ್ತಿರುವ ಅವಮಾನ. ವಾಲ್ಮೀಕಿಯನ್ನು ನಂಬುವ ನೀವು ಅವರ ಗ್ರಂಥವನ್ನು ಯಾಕೆ ನಿರಾಕರಿಸುತ್ತೀರಿ? ಎಂದು ಪ್ರಶ್ನಿಸಿದ ಪ್ರಮೋದ್ ಮುತಾಲಿಕ, ಈ ವಿಚಾರವಾದಿಗಳು ಕಾಂಗ್ರೆಸ್​ ಪಕ್ಷವನ್ನು ಮೆಚ್ಚಿಸುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಇದೀಗ ದ್ವಾರಕನಾಥ ಹೇಳಿಕೆ ಹೊಸ ವಿವಾದ ಸೃಷ್ಟಿಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here