ದೀಪಾಂಜಲಿ ನಗರ ವಾರ್ಡ್​ನ ಇಂದಿರಾ ಕ್ಯಾಂಟೀನ್ ಅಡುಗೆ ಕೇಂದ್ರಕ್ಕೆ ಭೇಟಿ ನೀಡಿದ D.C.M ಪರಮೇಶ್ವರ್​​…!

ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟದ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಪರಮೇಶ್ವರ್​​​​ ಇಂದಿರಾ ಕ್ಯಾಂಟೀನ್  ಅಡುಗೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೀಪಾಂಜಲಿನಗರ ಹಾಗೂ ನಾಯಂಡನಹಳ್ಳಿ ವಾರ್ಡ್​ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ad

ಕ್ಯಾಂಟೀನ್​ಗೆ ಬಂದಿದ್ದ ಗ್ರಾಹಕರ ಬಳಿ ಊಟದ ಟೇಸ್ಟ್ ಹಾಗೂ ಗುಣಮಟ್ಟದ ಬಗ್ಗೆ ವಿಚಾರಿಸಿದರು. ಈ ವೇಳೆ ಸ್ಥಳೀಯರು ಇಂದಿರಾ ಕ್ಯಾಂಟೀನ್​ ಅವ್ಯವಸ್ಥೆಯ ಬಗ್ಗೆ ಸಚಿವರಿಗೆ ದೂರು ನೀಡಿದ್ದಾರೆ. ಇತ್ತೀಚೆಗಷ್ಟೇ ಗೋವಿಂದರಾಜನಗರ ವಾರ್ಡ್ ಬಿಜೆಪಿ ಕಾರ್ಪೊರೇಟರ್​​​​ ಉಮೇಶ್​ ಶೆಟ್ಟಿ ಇಂದಿರಾ ಕ್ಯಾಂಟೀನ್​​ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ಬೆಳಕು ಚೆಲ್ಲಿದ್ದರು. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತು ಅಧಿಕಾರಿಗಳು ಡಿಸಿಎಂಗೆ ಸಾಥ್​ ನೀಡಿದರು. ದೀಪಾಂಜಲಿ ನಗರ ವಾರ್ಡ್​ನ ಇಂದಿರಾ ಕ್ಯಾಂಟೀನ್ ಅಡುಗೆ ಕೇಂದ್ರಕ್ಕೆ ಭೇಟಿ ನೀಡಿದ ಪರಮೇಶ್ವರ್​​ ಇಡ್ಲಿ ಸೇವಿಸಿದ್ದಾರೆ.