D K Shivakumar Congrats to Btv for reporting IT-Raid News | ಬಿಟಿವಿಗೆ ಅಭಿನಂದನೆ ಸಲ್ಲಿಸಿದ ಸಚಿವ ಡಿಕೆ ಶಿವಕುಮಾರ್​​ ಐಟಿ ದಾಳಿ ಸುದ್ದಿಯನ್ನು ನೀವು ಪಕ್ಷಾತೀತವಾಗಿ ಪ್ರಸಾರ ಮಾಡಿದ್ದೀರ

0
30

ಬಿಟಿವಿಗೆ ಅಭಿನಂದನೆ ಸಲ್ಲಿಸಿದ ಸಚಿವ ಡಿಕೆ ಶಿವಕುಮಾರ್​​
ಐಟಿ ದಾಳಿ ಸುದ್ದಿಯನ್ನು ನೀವು ಪಕ್ಷಾತೀತವಾಗಿ ಪ್ರಸಾರ ಮಾಡಿದ್ದೀರ
ನಿಮ್ಮ ವಾಹಿನಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ
ಬಿಟಿವಿಯ ನಿಷ್ಪಕ್ಷಪಾತ, ನಿರ್ದಿಷ್ಟ ವರದಿಗೆ ಡಿಕೆಶಿ ಮೆಚ್ಚುಗೆ
ಎಲ್ಲರಿಗಿಂತಲೂ ಮೊದಲು ಐಟಿ ದಾಳಿ ವರದಿ ಮಾಡಿದ್ದ ಬಿಟಿವಿ
ಬುಧವಾರ ಬೆಳಿಗ್ಗೆ 8.31ಕ್ಕೆ ಐಟಿ ದಾಳಿಯನ್ನು ಸ್ಫೋಟಿಸಿದ್ದ ಬಿಟಿವಿ
ಕಲ್ಪಿತ ವರದಿ ಮಾಡದೇ ಐಟಿ ಇಲಾಖೆ ಮಾಹಿತಿ ವರದಿ ಮಾಡಿದ್ದ ಬಿಟಿವಿ
==========

ಜಾತ್ಯತತ ತತ್ವದ ಮೇಲೆ ನಂಬಿಕೆ ಇಟ್ಟವರಿಗೆ ಜಯ ಸಿಕ್ಕಿದೆ
ಚುನಾವಣೆ ಆಯೋಗದಿಂದ ನಮಗೆ ನ್ಯಾಯ ಸಿಕ್ಕಿದೆ
ನ್ಯಾಯದ ಪೀಠದಿಂದ ಅನ್ಯಾಯವನ್ನು ನಿರೀಕ್ಷೆ ಮಾಡಲಾಗದು
ನಾನು ಪಕ್ಷಕ್ಕೆ ಅಳಿಲು ಸೇವೆ ಮಾಡಿದ್ದೇನೆ
ನಿಮ್ಮ ಮಾಧ್ಯಮ ನ್ಯಾಯಬದ್ಧವಾದ ವಿಚಾರ ತಿಳಿಸಿದೆ
ಹೈಕಮಾಂಡ್​ ಕೊಟ್ಟ ಕೆಲಸ ಮುಗಿಸಿದ್ದೇನೆ ಅಷ್ಟೇ
ಯಾವ ಗಿಫ್ಟ್​ ಅನ್ನೂ ಅಪೇಕ್ಷೆ ಮಾಡುವುದಿಲ್ಲ
ಮಳೆ-ಬೆಳೆಗೆ ದೇವರನ್ನು ನಾನು ಪ್ರಾರ್ಥನೆ ಮಾಡುತ್ತೇನೆ
ಕಾಲೇಜಿಂದ ಬಂದಾಗಿಂದಲೇ ಖಾದಿ ಬಟ್ಟೆ ಹಾಕಿಕೊಂಡಿದ್ದೆ
ರಾಜಕೀಯ ಮಾಡಲೆಂದೇ ಬೆಂಗಳೂರಿಗೆ ಬಂದವನು
ನಾನು ಯಾರನ್ನೂ ಮೆಚ್ಚಿಸಲು ಕೆಲಸ ಮಾಡುತ್ತಿಲ್ಲ
ನನ್ನ ಆತ್ಮ ಸಾಕ್ಷಿ ಹೇಳಿದಂತೆ ಕೆಲಸ ಮಾಡುತ್ತೇನೆ
ಇದು ನನ್ನ ಗೆಲುವಲ್ಲ, ಕಾಂಗ್ರೆಸ್​ ಪಕ್ಷದ ಗೆಲುವು

ಗುಜರಾತ್​​​ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್​ ಪಟೇಲ್​​​ ಭರ್ಜರಿ ಜಯಭೇರಿ ಭಾರಿಸಿದ ಬೆನ್ನಲ್ಲೇ ಅದಕ್ಕೆ ಕಾರಣಕರ್ತರಾದ ಡಿಕೆಶಿಗೆ ಹೈಕಮಾಂಡ್​ ಕೃತಜ್ಞತೆ ಸಲ್ಲಿಸಿದೆ. ಇವತ್ತು ಬೆಳಿಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಜ್ಯಸಭೆ ಪ್ರವೇಶ ಮಾಡಿದ ಅಹ್ಮದ್​ ಪಟೇಲ್​​​ ದೂರವಾಣಿ ಕರೆ ಮಾಡಿ ಡಿಕೆಶಿಗೆ ಕೃತಜ್ಞತೆ ಸಲ್ಲಿಸಿದ್ರು. ಸಂಕಷ್ಟ ಕಾಲದಲ್ಲಿ ಪಕ್ಷದ ಕೈ ಹಿಡಿದಿದ್ದೀರಿ ಎಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರು ಡಿಕೆಶಿಗೆ ಹೇಳಿದ್ದಾರೆ.
======
ಈ ಮಧ್ಯೆ ಇವತ್ತು ಬೆಳಿಗ್ಗೆ ಡಿಕೆಶಿ ನಿವಾಸಕ್ಕೆ ಗಣ್ಯರು ಮತ್ತು ಸಚಿವರು ಆಗಮಿಸಿದ್ರು. ಪೌರಾಡಳಿತ ಸಚಿವ ರೋಷನ್​ಬೇಗ್​​​ ಸೇರಿದಂತೆ ಹಲವರು ಆಗಮಿಸಿದ್ದರು.
====
ಇನ್ನು ಅಹ್ಮದ್​ ಪಟೇಲ್​​ ಗೆಲುವಿನ ನಂತ್ರ ಮೊದಲ ಪ್ರತಿಕ್ರಿಯೆ ನೀಡಿದ ಡಿಕೆಶಿ ನನ್ನೊಬ್ಬನ ಶ್ರಮದಿಂದ ಪಟೇಲ್​​ ಗೆದ್ದಿಲ್ಲ ಅಂದ್ರು.
=====
Byte: ಡಿ.ಕೆ.ಶಿವಕುಮಾರ್​​, ಸಚಿವ
======
End
======
ಡಿಕೆಶಿಗೆ ಮೇಡಂ,ಪಟೇಲ್​ ಫೋನ್​​
============
ಜಿದ್ದಾಜಿದ್ದಿನ ಗುಜರಾತ್​​​ ರಾಜಕೀಯ ಸಮರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರ ಪರಮಾಪ್ತ ಅಹ್ಮದ್​ ಪಟೇಲ್​​​ ಗೆಲುವು ಸಾಧಿಸಿದ್ದಾರೆ. ಗುಜರಾತ್​​​ ರಾಜ್ಯಸಭೆ ಹೈಡ್ರಾಮಾಗೆ ತಡರಾತ್ರಿ ರೋಚಕ ತೆರೆ ಬಿದ್ದಿದೆ. ಚುನಾವಣಾ ಆಯೋಗ ಇಬ್ಬರು ಕಾಂಗ್ರೆಸ್​ ಶಾಸಕರ ಬಹಿರಂಗ ಮತಗಳನ್ನು ಅಸಿಂಧುಗೊಳಿಸಿದ ನಂತ್ರ ಮಧ್ಯರಾತ್ರಿ 1.45ಕ್ಕೆ ಫಲಿತಾಂಶ ಘೋಷಣೆಯಾಗಿದೆ. 44 ಮತಗಳನ್ನು ಪಡೆದ ಅಹ್ಮದ್​ ಪಟೇಲ್​​ ಜಯಭೇರಿ ಭಾರಿಸಿದ್ದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಲವಂತ್​​ ರಜಪೂತ್​​ಗೆ 38 ಮತಗಳಷ್ಟೇ ಸಿಕ್ಕಿವೆ.
=====
ಈ ಮಧ್ಯೆ ಗುಜರಾತ್​​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಟ್ರಬಲ್​ ಶೂಟರ್​​​ ಡಿಕೆ ಶಿವಕುಮಾರ್​​​ಗೆ ಭರ್ಜರಿ ಉಡುಗೊರೆ ನೀಡಲು ಎಐಸಿಸಿ ನಿರ್ಧರಿಸಿದೆ. ಶೀಘ್ರದಲ್ಲೇ ಡಿಕೆಶಿಗೆ ಸಿದ್ದು ಸಂಪುಟದಲ್ಲಿ ಮತ್ತೊಂದು ಮಹತ್ವದ ಹುದ್ದೆ ಸಿಗಲಿದೆ. ಇಂಧನ ಇಲಾಖೆ ಜತೆಗೆ ಹೋಂ ಮಿನಿಸ್ಟರ್​​ ಹೊಣೆ ಹೊರಿಸಲು ಮೇಡಂ ಸೋನಿಯಾ ಗಾಂಧಿ ನಿರ್ಧಾರ ಮಾಡಿದ್ದಾರೆ. ಪರಮೇಶ್ವರ್​ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಸಚಿವರ ಪೋಸ್ಟ್​ ಡಿಕೆಶಿ ಪಾಲಾಗುವುದು ಖಚಿತವಾಗಿದೆ.
=======

LEAVE A REPLY

Please enter your comment!
Please enter your name here