ಆನಂದ‌ ಸಿಂಗ್ ಬಗ್ಗೆ ಡಿ.ಕೆ.ಸುರೇಶ್ ಕೊಟ್ಟ ಸ್ಪೋಟಕ್ ಮಾಹಿತಿ ಏನು ಗೊತ್ತಾ?

 

ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸಲು ಸರ್ಕಸ್​ ನಡೆಸುತ್ತಿರುವ ಬೆನ್ನಲ್ಲೇ ಸಂಸದ ಡಿ.ಕೆ.ಸುರೇಶ್​ ಸ್ಪೋಟಕ್​ ಮಾಹಿತಿಯೊಂದನ್ನು ನೀಡಿದ್ದಾರೆ. ಹೌದು ಕಾಂಗ್ರೆಸ್​ ಎಮ್​​.ಎಲ್​.ಎಗಳ ಕಾವಲಿಗೆ ನಿಂತಿರುವ ಡಿ.ಕೆ.ಸುರೇಶ್, ಆನಂದ ಸಿಂಗ್​ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಾಂಗ್ರೆಸ್​ ಸಂಪರ್ಕದಲ್ಲೇ ಇದ್ದಾರೆ. ಆದರೇ ಆನಂದ ಸಿಂಗ್​ ಮೋದಿ ಭೇಟಿಗೆ ಹೋಗಿದ್ದಾರೆ ಎಂದಿದ್ದಾರೆ.

 

ಹೌದು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಸಂಸದ ಡಿ.ಕೆ.ಸುರೇಶ್​, ನರೇಂದ್ರ ಮೋದಿ ಭೇಟಿಗಾಗಿ ಆನಂದ್ ಸಿಂಗ್ ಹೋಗಿದ್ದಾರೆ. ಐಟಿ, ಇಡಿ ರೇಡ್ ಮೂಲಕ ಪಿಎಂ ಮೋದಿ ಬೆದರಿಕೆ ಹಾಕಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಆನಂದ್​ ಸಿಂಗ್ ಮೋದಿ ಭೇಟಿಗಾಗಿ ಗುಜರಾತ್​ಗೆ ತೆರಳಿದ್ದಾರೆ ಎಂದರು. ಅಲ್ಲದೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ರೆ ಏನಂತೆ. ಮೊದಲು ಅವರು ಸದಸ್ಯರ ಬಹುಮತ ಸಾಬೀತು ಮಾಡಲಿ. ವಿಧಾನಸೌಧದಲ್ಲಿ ನಾವು ‌ಬಹುಮತವನ್ನು ಸಾಬೀತು ‌ಮಾಡ್ತೀವಿ ಎಂದರು.