ಬಿಜೆಪಿಯ ಗಿಮಿಕ್ ಅರಿತ ಗ್ರಾಮಸ್ಥರು.. ದಲಿತರ ಮನೆಯ ವಾಸ್ತವ್ಯಕ್ಕೆ ಧಿಕ್ಕಾರವೆಂದರು!!

ಇಂದು ಅಂಬೇಡ್ಕರ್ ಜಯಂತಿ, ಇದರ ಅಂಗವಾಗಿ ಮುಂಬರುವ ವಿಧಾನ ಸಭಾ ಚುನಾವಣಾ ಗಿಮಿಕ್ ಎನ್ನುವಂತೆ ಸಮಾನತೆಯ ಮಂತ್ರ ಜಪಿಸಲು ಬಿಜೆಪಿ ತನ್ನ ರಾಜ್ಯ ಮಟ್ಟದ ಮುಖಂಡರಿಗೆ ಜಯಂತಿ ಆಚರಣೆ ಮುನ್ನಾದಿನ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಲು ಸೂಚಿಸಿತ್ತು.

ಆದರೆ ಅಲ್ಲಿ ನಡೆದಿದ್ದೇನು?

ರಾಜ್ಯ ನಾಯಕರ ಸೂಚನೆ ಮೇರೆಗೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿಯೂ ಸಹ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಎಂಎಲ್ಸಿ ಫ್ರೋಫೆಸರ್ ಮಲ್ಲಿಕಾರ್ಜುನಪ್ಪ ಮತ್ತು ತಂಡ ಸಿದ್ದವಾಗಿತ್ತು. ಅದರಂತೆ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಮಡಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಲಾಗಿತ್ತು.

ಅದಕ್ಕಾಗಿ ತಮಡಹಳ್ಳಿ ಗ್ರಾಮದ ಗ್ರಾಮ ಪಂಚಾಯುತಿ ಸದಸ್ಯ ಹಾಗೂ ಬಿಜೆಪಿ ಕಾರ್ಯಕರ್ತ ಸಿದ್ದರಾಜು ಮನೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಇದರ ಸುಳಿವರಿತ ಗ್ರಾಮದಲ್ಲಿನ ದಲಿತ ಯುವಕರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ವಿರೋದಿ ಹೇಳಿಕೆ ನೀಡಿದ್ದಾರೆ. ಆ ಪಕ್ಷದವರಿಗೆ ದಲಿತರ ಮನೆಯಲ್ಲಿನ ವಾಸ್ತವ್ಯ ಕೇವಲ ಬೂಟಾಟಿಕೆಗೆ ಮಾತ್ರವಾಗಿದೆ ಎಂದು ವಿರೋಧಿಸಿ, ಮುಖಂಡರು ಬಂದಲ್ಲಿ ಹಿಂದೆ ಕಳುಹಿಸುವುದಾಗಿ ಎಚ್ಚರಿಸಿದ್ದರು.

ಎಚ್ಚರಿಕೆ ಮುನ್ಸೂಚನೆ ತಿಳಿಯುತ್ತಿದ್ದಂತೆ ಮಾಜಿ ಎಂಎಲ್ಸಿ ಮಲ್ಲಿಕಾರ್ಜುನಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ಕೆರೆಹಳ್ಳಿ ಮಹದೇವಸ್ವಾಮಿ ಸೇರಿದಂತೆ ವಾಸ್ತವ್ಯಕ್ಕೆ ತೆರಳಲು ಸಜ್ಜಾಗಿದ್ದ ಮುಖಂಡರು ಗ್ರಾಮದತ್ತ ಮುಖ ಮಾಡಿಲ್ಲ. ಒಟ್ಟಾರೆ ದಲಿತರ ಮನೆ ವಾಸ್ತವ್ಯ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದಾಯಿತು.

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here