ದರ್ಶನ್ ಹುಟ್ಟು ಹಬ್ಬಕ್ಕೆ ಕಾದಿದೆ ಅಭಿಮಾನಿಗಳ ದಂಡು. ಅವರಿಗಾಗಿ ಮಾಡಿದ ವಿಶೇಷ ಸಾಂಗ್ ಹೇಗಿದೆ ನೀವೇ ನೋಡಿ..

ಚಾಲೆಂಜಿಂಗ್ ಸ್ಟಾರ್ ದರ್ಶನ ಹುಟ್ಟುಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬವನ್ನು ಈ ಭಾರಿ ವಿಭಿನ್ನವಾಗಿ ಆಚರಿಸಲು ದರ್ಶನ ಅಭಿಮಾನಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು 15 ದಿನಗಳ ಕಾಲ ಡಿ ಉತ್ಸವ ಹೆಸರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಹುಟ್ಟುಹಬ್ಬವನ್ನು ಉತ್ಸವದ ರೀತಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

15 ದಿನಗಳ ಕಾಲ ರಾಜ್ಯದಾದ್ಯಂತ ದರ್ಶನ ಅಭಿಮಾನಿಗಳು ವಿಭಿನ್ನವಾಗಿ ಸಾರಥಿಯ ಹುಟ್ಟುಹಬ್ಬ ಆಚರಿಸಲಿದ್ದು, ಈಗಾಗಲೇ ಕೌಂಟ್​ ಡೌನ್​ ಆರಂಭವಾಗಿದೆ. ಅಭಿಮಾನಿಗಳೇ ಸಿದ್ಧಪಡಿಸಿರುವ ದರ್ಶನ್​ ಪೇಸ್​ಬುಕ್​ ಪೇಜ್​, ವಾಟ್ಸಪ್​​, ಗ್ರೂಪ್​ಗಳಲ್ಲಿ ದರ್ಶನ ಅವರ ಸ್ಮರಣೀಯ ಕ್ಷಣಗಳು, ಅಪರೂಪದ ಪೋಟೋಗಳನ್ನು ಹಾಕಿ, ದಾಸ್​ನ ಅಪರೂಪದ ಮುಖ ಪರಿಚಯ ಮಾಡಿಸುವ ಪ್ರಯತ್ನ ನಡೆಸಿದ್ದಾರೆ.
ಈಗಾಗಲೇ ಬೇರೆ-ಬೇರೆ ಪ್ರಸಿದ್ಧ ಚಿತ್ರಗೀತೆಗಳಿಗೆ ಹಾಗೂ ದರ್ಶನ ಅಭಿನಯಿಸಿರುವ ಚಿತ್ರದ ಹಾಡುಗಳಿಗೆ ದರ್ಶನ ಪೋಟೋಗಳನ್ನು ಸೇರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಅಲ್ಲದೇ ದರ್ಶನ ಕುರಿತಾದ ಹಾಡುಗಳನ್ನು ಸಿದ್ದಪಡಿಸುತ್ತಿದ್ದು ಪ್ರತಿನಿತ್ಯ ಒಂದಿಲ್ಲೊಂದು ಸ್ಯಾಂಡಲ್​ವುಡ್​​​ ನ ಬಾಕ್ಸಾಪೀಸ್ ಸುಲ್ತಾನ್ ದರ್ಶನ ಹಾಡುಗಳನ್ನು ಅಭಿಮಾನಿಗಳಿಗೆ ಹಂಚುತ್ತಿದ್ದಾರೆ. ಒಟ್ಟಿನಲ್ಲಿ ಈ ಭಾರಿ ದಚ್ಚು ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿ ಪಡೆ ಸಜ್ಜಾಗಿದೆ.

 

 

 

ಇನ್ನು ಬಿಟಿವಿನ್ಯೂಸ್​ ಕೂಡ ನೀವೆಂದೂ ಕಂಡಿರದ ದರ್ಶನ ಅವರ ಅಪರೂಪದ ಕ್ಷಣಗಳನ್ನ ನಿಮಗೆ ಪರಿಚಯಿಸಲಿದೆ. ಹೌದು ನಾಳೆಯಿಂದ ನಾವು ಕೂಡ ಐರಾವತ್​ ದರ್ಶನ ಅವರ ಅಪರೂಪದ ಪೋಟೋಗಳ ಜೊತೆ ದರ್ಶನ ಅವರ ಅಂತಃಕರಣದ ಇನ್ನೊಂದು ಮುಖವನ್ನು ಪರಿಚಯಿಸಲಿದ್ದೇವೆ. ಮರೆಯದೇ ನೋಡ್ತಾ ಇರಿ.

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here