ಯಾವಾಗ ತೆರೆಗೆ ಬರ್ತಿದೆ ಗೊತ್ತಾ ‘ಕುರುಕ್ಷೇತ್ರ’! ಸಿನಿ ತಂಡದಿಂದ ಹೊರಬಿತ್ತು ಸಿಹಿ ಸುದ್ದಿ!!

‘ಕುರುಕ್ಷೇತ್ರ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಹಾಗೂ ಬಹು ನಿರೀಕ್ಷಿತ ಚಿತ್ರ.  ಸೆಟ್ಟೇರಿದಾಗಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಹಾಗಾದ್ರೆ, “ಮುನಿರತ್ನ ಕುರುಕ್ಷೇತ್ರ’ ಚಿತ್ರ ಬಿಡುಗಡೆಯ ದಿನಾಂಕ ಅನೌನ್ಸ್‌ ಮಾಡಿದ್ದಾರ..? ಎನ್ನುವ ಪ್ರಶ್ನೆ ಮೂಡುವುದು ಸಹಜ , ಆದರೆ ಚಿತ್ರದ ನಿರ್ಮಾಪಕರು ಇನ್ನೂ ಚಿತ್ರ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಿಲ್ಲ. ಹಾಗಾದರೆ ಕುರುಕ್ಷೇತ್ರ ಸದ್ಯ ಯಾವ ವಿಚಾರಕ್ಕೆ ಸುದ್ದಿಯಾಗಿದೆ ಎಂದರೆ  ‘ಮುನಿರತ್ನ ಕುರುಕ್ಷೇತ್ರ’ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.

ad

ನಾಲ್ಕು ಭಾಷೆಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸಿಹಿ ಸುದ್ದಿಯನ್ನು ಕೊಟ್ಟ ಚಿತ್ರತಂಡ  ಭಾನುವಾರದಂದು  ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ  ಪೋಸ್ಟರ್ ರಿಲೀಸ್ ಮಾಡಿದೆ. ಯುಗಾದಿ ಸಮಯದಲ್ಲೇ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆಲ್ಲಲು ನಿರ್ಧರಿಸಿದ್ದರೂ ಲೋಕಸಭೆ ಚುನಾವಣೆ ಕಾರಣದಿಂದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿತ್ತು. ಇನ್ನು ಅತಿ ಶೀಘ್ರವಾಗಿ ಹಿಂದಿ ಅವತರಣಿಕೆಯಲ್ಲೂ ಸಹ ಬಿಡುಗಡೆಯಾಗಲಿದ್ದು ಬೇರೆಲ್ಲಾ ಭಾಷೆಗಳ ಡಬ್ಬಿಂಗ್ ಮುಗಿದ ನಂತರ ಇದನ್ನು ಚಿತ್ರತಂಡ ಕೈಗೆತ್ತಿಕೊಳ್ಳಲಾಗುತ್ತದೆ.

ಪೌರಾಣಿಕ ಕಥಾನಕ ಒಳಗೊಂಡಿರುವ ಈ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಕಾಣಿಸಲಿದ್ದಾರೆ. ರೆಬೆಲ್ ಸ್ಟಾರ್ ದಿ. ಅಂಬರೀಶ್ ಭೀಷ್ಮನಾಗಿದ್ದಾರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿದ್ದಾರೆ, ಅರ್ಜುನ್ ಸರ್ಜಾ ಕರ್ಣನಾಗಿ, ಅಭಿಮನ್ಯು ಪಾತ್ರದಲ್ಲಿ  ‘ಜಾಗ್ವಾರ್’ ಖ್ಯಾತಿಯ ನಿಖಿಲ್ ಕುಮಾರಸ್ವಾಮಿ ಅಭಿನಯಿಸಿದ್ದಾರೆ.

ಸ್ನೇಹಾ, ಮಾಘನಾ ರಾಜ್, ಹರಿಪ್ರಿಯಾ, ಸೋನು ಸೂದ್ ಹಾಗೂ ದ್ಯಾನಿಷ್ ಅಖ್ತರ್ ಸೈಫ್ ಸಹ ತೆರೆ ಹಂಚಿಕೊಂಡಿರುವ “ಕುರುಕ್ಷೇತ್ರ”ಕ್ಕೆ ವಿ. ಹರಿಕೃಷ್ಣ ಸಂಗೀತವಿದೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ರಚನೆ ಮಾಡಿದ್ದಾರೆ. ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಕುರುಕ್ಷೇತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಅತಿ ಶೀಘ್ರದಲ್ಲಿ ಸಿನಿಮಾವನ್ನು 4 ಭಾಷೆಯಲ್ಲಿ ಅದ್ದೂರಿಯಾಗಿ  ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.