ಅಂಬಿ ಸರ್ ರಿಯಲ್ ಯಜಮಾನ – ಮನಬಿಚ್ಚಿ ಮಾತನಾಡಿದ ದರ್ಶನ್

ಈಗಾಗಲೆ ಯಜಮಾನನ ಮೆರವಣಿಗೆಗೆ ರಾಜ್ಯಾದ್ಯಂತ ಭರ್ಜರಿ ತಯಾರಿ ಆರಂಭ ಗೊಂಡಿದ್ದು ಸಾಂಗ್ ಗಳು ಸಖತ್ ಹಿಟ್ ಆಗಿವೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಸ್ವತಹ ಯಜಮಾನನೆ ಚಿತ್ರದ ಚಿತ್ರಿಕರಣದ ಬಗ್ಗೆ ಎಳೆ ಎಳೆ ಯಾಗಿ ಬಿಚ್ಚಿಟ್ಟಿದ್ದಾರೆ ..
ಇದೇ ವೇಳೆ ಮಾತಾಡಿದ ದರ್ಶನ್ , ಪ್ರೇಕ್ಷಕರ ನಿರೀಕ್ಷೆಗೆ ಯಾವುದೆ ರೀತಿಯ ಮೋಸ ಆಗಲ್ಲ ಯಾವುದೇ ಉಹಪೋಹಗಳಿಲ್ಲದೆ ಒಂದು ಪಕ್ಕಾ ಕನ್ನಡ ಸೊಗಡಿರುವ ಚಿತ್ರ ಇದಾಗಿದೆ ಎಂದು ತಿಳಿಸಿದರು …

ವಿಷ್ಣು ಸರ್ ರವರ ಯಜಮಾನ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು …

ಇದೇ ವೇಳೆ ಯಜಮಾನನಿಗಾಗಿ ದರ್ಶನ್ ನಾ ಅಥವಾ ದರ್ಶನ್ ಗಾಗಿ ಯಜಮಾನನ ಎಂಬ ಪ್ರಶ್ನೆಗೆ ಯಜಮಾನನಿಗೋಸ್ಕರಾ ದರ್ಶನ್ ಎನ್ನುವುದರ ಮೂಲಕ ತಮ್ಮ ಸರಳತೆಯನ್ನ ಮೆರೆದರು .
ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಅನೇಕ ವಿಷಯಗಳನ್ನು ಹಂಚಿಕೊಂಡರು. ನಿಮ್ಮ ಜೀವನದಲ್ಲಿ ‘ಯಜಮಾನ’ ಯಾರು ಎನ್ನುವ ಪ್ರಶ್ನೆಗೆ ಪಟ್ ಅಂತ ದರ್ಶನ್ ಹೇಳಿದ್ದು, ಅಂಬರೀಶ್ ಅವರ ಹೆಸರನ್ನು.
”ಅಂಬರೀಶ್ ಸರ್ ನಮ್ಮ ಯಜಮಾನರು” ಎಂದು ಹೇಳುವ ಮೂಲಕ ದರ್ಶನ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ”ಈ ಚಿತ್ರದ ಸಮಯದಲ್ಲಿ ಅವರು ಇಲ್ಲ, ಅಂಬರೀಶ್ ಸರ್ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ.” ಎಂದು ವಿಷಾದ ವ್ಯಕ್ತಪಡಿಸಿದರು.

ದರ್ಶನ್ ‘ಯಜಮಾನ’ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋದಾಗ ಅಂಬರೀಶ್ ಗಿಫ್ಟ್ ತೆಗೆದುಕೊಂಡು ಬಾ ಎಂದಿದ್ದರಂತೆ. ಆದರೆ, ದರ್ಶನ್ ಬರುವ ಮೊದಲೇ ಅಂಬರೀಶ್ ಎಲ್ಲರನ್ನು ಬಿಟ್ಟು ಅಗಲಿದ್ದು ನೋವಿನ ಸಂಗತಿ ಎಂದರು.