ತಾರಾಪ್ರಚಾರ ಖಾತೆ ತೆರೆದ ‘ದಚ್ಚು’ : ಸುಮಲತಾ ಪರ ಟೊಂಕ ಕಟ್ಟಿ ನಿಲ್ಲಲಿದೆಯೇ ಸ್ಯಾಂಡಲ್ ವುಡ್..??

ಮಂಡ್ಯ ಜಿಲ್ಲೆಯಲ್ಲಿ ಗೌಡರ ಕುಟುಂಬ ಕಾಲಿಡುತ್ತಿದ್ದಂತೆ ಸುಮಲತಾಗೆ ಕಾಂಗ್ರೆಸ್ ಕೈ ಕೊಟ್ಟಿದೆ. ಸುಮಲತಾಗೆ ಲೋಕಸಭಾ ಚುವಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗೋದು ಕಷ್ಟಸಾಧ್ಯ ಅನ್ನೋದು ಒಂದೆಡೆಯಾದ್ರೆ ಕಾಂಗ್ರೆಸ್ ಟಿಕೆಟ್ ಸಿಗದೇ ಹೋದ್ರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಅಂತಿದಾರೆ ಸುಮಲತಾ..

ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗದೇ ಹೋದ್ರೆ ಸುಮಲತಾ ಪರವಾಗಿ ನಿಲ್ಲೋರು ಯಾರ್ಯಾರು..? ‘ಡೋಂಟ್ ವರಿ ಅಮ್ಮಾ.. ನಿಮ್ಮ ಜೊತೆ ನಾವಿದ್ದೇವೆ’ ಅಂತಿದೆ ಗಾಂಧೀನಗರ..

ಹಿರಿಯನಟ ಅಂಬಿ ಚಿತ್ರರಂಗದಲ್ಲೇ ಅಜಾತಶತ್ರು.. ಅಂಬಿ ಗುಡುಗಿದರೆ ತಲೆಬಗ್ಗಿ ನಡೆಯುತ್ತಿತ್ತು ಸ್ಯಾಂಡಲ್ ವುಡ್.. ಹಾಗೇ ಕನ್ನಡ ಚಿತ್ರರಂಗವನ್ನ, ಚಿತ್ರ ರಂಗದವರನ್ನು ಅಂಬರೀಶ್ ಅಷ್ಟೇ ಪ್ರೀತಿಸುತ್ತಿದ್ದರು ಅನ್ನೋದ್ರಲ್ಲಿ ಸಂಶಯವಿಲ್ಲ.. ಹೀಗಿರೋವಾಗ ಮಂಡ್ಯದಿಂದ ಸುಮಲತಾ ಕಣಕ್ಕಿಳಿದರೆ ಸ್ಯಾಂಡಲ್ ವುಡ್ ಸಪೋರ್ಟ್ ಮಾಡದೇ ಇರುತ್ತಾ..? ‘ಅಮ್ಮ ಕರೆದ್ರೆ ಖಂಡಿತ ಪ್ರಚಾರಕ್ಕೆ ಹೋಗ್ತೇನೆ ಅದ್ರಲ್ಲಿ ಸಂಶಯವೇ ಇಲ್ಲ’ ಅಂತಾ ಹೇಳೋ ಮೂಲಕ ತಾರಾ ಪ್ರಚಾರದಲ್ಲಿ ಅಧೀಕೃತ ಖಾತೆ ತೆರೆದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್..