ನಕಲಿ ಮಂಗಳಮುಖಿಗೆ ಬಿತ್ತು ಸಖತ್ ಗೂಸಾ- ಅಸಲಿ ಮಂಗಳಮುಖಿಯರ ಕೋಪಕ್ಕೆ ತುತ್ತಾದ ಯುವಕ ಕಂಗಾಲು.

ಮಂಗಳಮುಖಿಯರಿಂದ‌ ಸುಲಿಗೆ ಹೆಚ್ಚುತ್ತಿದೆ ಎಂಬ ಆರೋಪದ ಬೆನ್ನಲ್ಲೆ ಅಸಲಿ ಮಂಗಳಮುಖಿಯರು ನಕಲಿ ಮಂಗಳಮುಖಿಯರ ಮುಖವಾಡ ಬಿಚ್ಚಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ಇಂದು ಮದ್ಯಾಹ್ನ ಅಸಲಿ ಮಂಗಳ ಮುಖಿಯರು ಆಟೋದಲ್ಲಿ ಹೋಗುವಾಗ

adಜ್ಯೂಸ್ ಅಂಗಡಿ ಮುಂದೆ ಮಂಗಳಮುಖಿ ವೇಷದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ನೋಡಿದ್ದಾರೆ. ತಕ್ಷಣ ಅಲ್ಲೇ ಆ ಯುವಕನನ್ನು ಹಿಡಿದ ಅಸಲಿ ಮಂಗಳಮುಖಿಯರು ಆತನ ಬಟ್ಟೆ ಬಿಚ್ಚಿ ಸರಿಯಾಗಿ ಥಳಿಸಿದ್ದಾರೆ.

ನಗರದ ಹಲವೆಡೆ ಈ ರೀತಿ ಯುವಕರು ನಕಲಿ ಮಂಗಳಮುಖಿ ವೇಷ ಧರಿಸಿ ಜನರನ್ನು ದೋಚುತ್ತಿದ್ದಾರೆ. ಹೀಗಾಗಿ ನಮ್ಮಂಥ ದುಡಿದು ತಿನ್ನುವ ಮಂಗಳಮುಖಿಯರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಮಂಗಳಮುಖಿಯರು ಆರೋಪಿಸಿ ನಕಲಿ ಮಂಗಳಮುಖಿಯನ್ನು ಬಸವನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ನಕಲಿ ಮಂಗಳಮುಖಿ ಬಡಾವಣೆ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ.