ವಿಶ್ವದಲ್ಲೇ ಶ್ರೀಮಂತ ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್​ ಅಪರಾಧಿ ದಾವೂದ್​ ಇಬ್ರಾಹಿಂಗೆ ಬಿಗ್​ ಶಾಕ್​ ನೀಡಿದೆ. ದಾವೂದ್​ಗೆ ಸೇರಿದ ಸಹಸ್ರಾರು ಕೋಟಿ ರೂಪಾಯಿಗಳ ಆಸ್ತಿ-ಪಾಸ್ತಿಗಳನ್ನು ಇಂಗ್ಲೆಂಡ್​ ಸರ್ಕಾರ ಜಫ್ತಿ ಮಾಡಿಕೊಂಡಿದೆ. ದಾವೂದ್​ಗೆ ಒಟ್ಟಾರೆ 42 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ ಇದೆ. ಫೋರ್ಬ್ಸ್​ ಬ್ಯುಸಿನೆಸ್ ಮ್ಯಾಗಜೀನ್​​​ ಈ ಕುರಿತು ವರದಿ ಮಾಡಿದೆ. ಪಾಕಿಸ್ತಾನದ ಮೂರು ವಿಳಾಸ ಹಾಗೂ 21 ಹೆಸರುಗಳಲ್ಲಿ ದಾವೂದ್​ ಅಕ್ರಮ ಆಸ್ತಿ ಹೊಂದಿದ್ದಾನೆ. ಆಸ್ತಿ ಜಪ್ತಿ ಮಾಡಿ ದಾವೂದ್​ ವಿಳಾಸ ಹಾಗೂ ಅನಾಮಧೇಯ ಹೆಸರುಗಳನ್ನು ಬಹಿರಂಗ ಮಾಡಲಾಗಿದೆ. ವಾರ್ವಿಕ್​ಶೈರ್​ ಎಂಬಲ್ಲಿ ದಾವೂದ್​ ಅತ್ಯಾಧುನಿಕ ಹೋಟೆಲ್​ ಹೊಂದಿದ್ದ ಅಲ್ಲದೆ ಬ್ರಿಟಿನ್​ ದೇಶದ ಹಲವು ನಗರಗಳಲ್ಲಿ ದಾವೂದ್​ ಅಕ್ರಮ ಅಪಾರ್ಟ್​ಮೆಂಟ್ ಹೊಂದಿದ್ದಾನೆ. ದಾವೂದ್​ ಪಾತಕ ಕೃತ್ಯಗಳಿಗೆ ಇದೇ ಮೂಲಗಳಿಂದ ಸಾಕಷ್ಟು ಹಣ ಹರಿದು ಬರ್ತಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟಿನ್​ ಆಸ್ತಿಪಾಸ್ತಿ ಜಫ್ತಿಗೆ ಭಾರತ ಮನವಿ ಮಾಡಿತ್ತು. ದುಬೈ ಹೊರತುಪಡಿಸಿದ್ರೆ ಬ್ರಿಟನ್​ನಲ್ಲೆ ದಾವೂದ್​ ಅತ್ಯಧಿಕ ಆಸ್ತಿ ಪಾಸ್ತಿ ಹೊಂದಿದ್ದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here