ಬಿಟಿವಿ ವರದಿಯಿಂದ ಎಚ್ಚೆತ್ತ ಕೋಲಾರ ಡಿಸಿಸಿ ಬ್ಯಾಂಕ್​​​
ರೈತರಿಗೆ ಕಮಿಷನ್​​​ ಹಣ ವಾಪಸ್​ ನೀಡಿದ ಬ್ಯಾಂಕ್​​ ಆಡಳಿತ
ಸಿದ್ದು ಸಾಲಮನ್ನಾದಲ್ಲೇ ಲೂಟಿಗೆ ನಿಂತಿದ್ದ ಸಹಕಾರಿ ಬ್ಯಾಂಕ್​​​​
ಸಾಲದ ಹಣ ಮಂಜೂರಿಗೆ 80 ರೈತರಿಂದ 12 ಲಕ್ಷ ಕಮಿಷನ್​ ಲೂಟಿ
ಸುಂದರಪಾಳ್ಯದ VSSNL ಬ್ಯಾಂಕ್​​​ ಅಧಿಕಾರಿಗಳಿಂದ ಲೂಟಿ
ಸಾಲದ ಕಮಿಷನ್​​ ಲೂಟಿ ಕುರಿತು ವರದಿ ಮಾಡಿದ್ದ ಬಿಟಿವಿ
ಗಿರಿಸ್ವಾಮಿ, ಮುನಿಸ್ವಾಮಿರೆಡ್ಡಿಯ ಕಮಿಷನ್​​ ಆಟ ಬಯಲಾಗಿತ್ತು
ಬಿಟಿವಿ ವರದಿ ನಂತರ ತನಿಖೆ ನಡೆಸಿದ್ದ ಕೋಲಾರ ಡಿಸಿಸಿ ಬ್ಯಾಂಕ್​​​
ಸಿಕ್ಕಿ ಬೀಳುವ ಭೀತಿಯಿಂದ ರೈತರಿಗೆ ಕಮಿಷನ್​​ ಹಣ ವಾಪಸ್​
ಹಣ ವಾಪಸ್​ ಸಿಕ್ಕ ನಂತರ ಬಿಟಿವಿಗೆ ಅಭಿನಂದನೆ ಸಲ್ಲಿಸಿದ ರೈತರು

ಬಿಟಿವಿ ವರದಿ ಇಂಪ್ಯಾಕ್ಟ್​
============

ಬಿಟಿವಿ ವರದಿಯಿಂದ ಎಚ್ಚೆತ್ತುಕೊಂಡ ಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿ 85ಕ್ಕೂ ಹೆಚ್ಚು ರೈತರ ಬಳಿ 15 ಸಾವಿರದಂತೆ ಸುಮಾರು 12 ಲಕ್ಷಕ್ಕೂ ಹೆಚ್ಚು ಕಮಿಷನ್​ ಪಡೆದಿದ್ದ ಬಗ್ಗೆ ಬಿಟಿವಿಯಲ್ಲಿ ವರದಿ ಪ್ರಸಾರ ಮಾಡಿದ ನಂತರ ರೈತರಿಗೆ ಹಣ ವಾಪಸ್ ನೀಡಿದ್ದಾರೆ. ಹೌದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸುಂದರಪಾಳ್ಯದ ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ಗೆ ಸೇರಿದ ಪ್ರಾಥಮಿಕ ಕೃಷಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಜೂನ್‌ 20ಕ್ಕೂ ಮೊದಲೇ ಅರ್ಜಿ ಸಲ್ಲಿಸಿ ಸಾಲ ಮೂಂಜುರಾಗಿರುವ ರೈತರ ಆಕೌಂಟ್​ಗೆ ಹೋಗದೆ ಇದ್ದ ಹಣವನ್ನು ಸರ್ಕಾರ ಸಾಲ ಮನ್ನಾ ಮಾಡಿದ ನಂತ್ರ ರೈತರಿಗೆ ಹಣ ನೀಡಿ ತಲಾ 50ಸಾವಿರಕ್ಕೆ ಹತ್ತು ಸಾವಿರ ಠೇವಣಿ ಹಣ ಹಾಗೂ15 ಸಾವಿರ ಕಮಿಷನ್ ಪಡೆದಿದ್ದಾರೆ ಎಂದು ರೈತರು ಆರೋಪಿಸಿದ್ರು. ಕಮಿಷನ್​ ಹಣ ಪಡೆದ ಬಗ್ಗೆ ಯಾರೋಬ್ಬರಿಗೂ ತಿಳಿಸದಂತೆ ಪ್ರತಿಯೊಬ್ಬ ರೈತರನ್ನ ಗೌಪ್ಯವಾಗಿ ಸ್ವತಃ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಗಿರಿಸ್ವಾಮಿ ಅವರ ತಮ್ಮ ನಿವಾಸದಲ್ಲಿ ಹಣ ಹಂಚಿಕೆ ಮಾಡಲಾಗಿತ್ತು. ಈ ವಿಚಾರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನಿಸ್ವಾಮಿರೆಡ್ಡಿ ಸೇರಿದಂತೆ ಎಲ್ಲಾ ಸದಸ್ಯರಿಗೂ ಗೊತ್ತಿದೂ ಇವರೆಲ್ಲಾರು ಈ ದಂದೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿತ್ತು. ಇನ್ನೂ ಈ ದಂದೆಯ ಬಗ್ಗೆ ಜುಲೈ 28 ರಂದು ಬಿಟಿವಿಯಲ್ಲಿ ಡಿಸಿಸಿ ಬ್ಯಾಂಕ್​ನ ಕರ್ಮಕಾಂಡದ ಬಗ್ಗೆ ವಿಸೃತ ವರದಿ ಪ್ರಸಾರವಾದ ಹಿನ್ನಲೆ ಎಚ್ಚೆತ್ತುಕೊಂಡ ಬ್ಯಾಂಕ್​ ಆಡಳಿತ ಮಂಡಳಿ ತಕ್ಷಣ ಕಮಿಷನ್​ ಪಡೆದ ಹಣವನ್ನು ಪ್ರತಿಯೊಬ್ಬ ರೈತರಿಗೆ 15 ಸಾವಿರ ಹಣವನ್ನು ಗೌಪ್ಯವಾಗಿ ನೀಡಿ ಯಾರಿಗೂ ತಿಳಿಸದಂತೆ ಹೇಳಿದ್ದಾರೆ. ಇನ್ನೂ ಹಣ ಪಡೆದ ರೈತರು ಬಿಟಿವಿ ವರದಿಯಿಂದ ನಮ್ಮ ಹಣ ನಮ್ಮ ಕೈ ಸೇರಿದೆ ಎಂದು ಅಭಿನಂದನೆ ಸಲ್ಲಿಸಿ ಡಿಸಿಸಿ ಬ್ಯಾಂಕ್​ ಹಗರಣದ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ರು. ಈ ಬಗ್ಗೆ ಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿ ಮಾತ್ರ ಹೇಳಿಕೆ ನೀಡಲು ನಿರಾಕರಿಸಿದರು.

ಬೈಟ್:ಸುರೇಶ್​, ಕಮಿಷನ್​ ಹಣವನ್ನು ವಾಪಸ್​ ಪಡೆದ ರೈತ, ಸುಂದರಪಾಳ್ಯ, 8749015434
ಬೈಟ್:ಶ್ರೀನಿವಾಸ್​ಗೌಡ, ರೈತ ಮುಖಂಡ 9482803312

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here