ಮತದಾನಕ್ಕೆ ಡಿಸಿಪಿ ಅಣ್ಣಾಮಲೈ ಸ್ಫೂರ್ತಿ! ಜರ್ಮನಿಯಿಂದ ತಯ್ನಾಡಿಗೆ ಬಂದ ಈ ಯುವಕ !

ನಿಷ್ಠಾವಂತ ಅಧಿಕಾರಿಯಾಗಿರುವ ಅಣ್ಣಾ ಮಲೈ ತಮ್ಮ ಕೆಲಸದ ಮೂಲಕ ಸದ್ದು ಮಾಡಿದ ಅಧಿಕಾರಿ. ಅವರ ವ್ಯಕ್ತಿತ್ವದಿಂದ ಪ್ರೇರಿತನಾದ ಯುವಕನೊಬ್ಬ ಮತ ಚಲಾಯಿಸಲು ದೂರದ ಜರ್ಮನಿಯಿಂದ ಆಗಮಿಸುತ್ತಿದ್ದಾರೆ.

ad

ದಕ್ಷ, ಖಡಕ್ ಪೊಲೀಸ್ ಅಧಿಕಾರಿಯಾಗಿ ಯುವಕರಿಗೆ ಪ್ರೇರಣೆಯಾದ ಡಿಸಿಪಿ ಅಣ್ಣಾಮಲೈ ತಮ್ಮ ಸ್ಫೂರ್ತಿದಾಯಕ ಮಾತಿನ ಮೂಲಕ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಯಾವುದೇ ಸಿನಿಮಾ ಸ್ಟಾರ್​ಗೆ ಕಡಿಮೆ ಇಲ್ಲದಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ತಮ್ಮ ಮಿತಭಾಷೆ ಹಾಗೂ ತಮ್ಮ ನಿರಂತರ ಕಾರ್ಯಚಟುವಟಿಕೆಗಳ ಮೂಲಕವೇ ಆಗಾಗ ಹೆಡ್ಲೈನ್ ಗಳನ್ನು ಅಲಂಕರಿಸುವ ಡಿಸಿಪಿ ಅಣ್ಣಾಮಲೈ ಈಗಾ ಮತ್ತೆ ಸುದ್ದಿಯಲ್ಲಿದ್ದಾರೆ. ತಾನೊಬ್ಬ ಅಧಿಕಾರಿ ಎಂಬ ದರ್ಪವಿಲ್ಲದೆ ಜನರ ಕಷ್ಟಕ್ಕೆ ಧ್ವನಿಯಾಗುವ ನಿಷ್ಠಾವಂತ ಅಧಿಕಾರಿಯಾಗಿರುವ ಅಣ್ಣಾ ಮಲೈ ತಮ್ಮ ಕೆಲಸದ ಮೂಲಕ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತಾರೆ. ಅವರ ಕೆಲಸದಿಂದ ಪ್ರೇರಣೆಗೊಂಡ ಯುವಕನೊಬ್ಬ ಈಗ ಮತ ಚಲಾಯಿಸುವುದಕ್ಕೆ ದೂರದ ಜರ್ಮನಿಯಿಂದ ನಾಡಿಗೆ ಆಗಮಿಸುತ್ತಿದ್ದಾರೆ. ಅಲ್ಲದೇ ನನ್ನ ಈ ನಿರ್ಧಾರಕ್ಕೆ ಕಾರಣ ನೀವೇ ಎಂದು ಅವರಿಗೆ ಸಂದೇಶ ಕಳುಹಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಾಲು ಸಾಲು ರಜಾ ಸಿಕ್ಕರೆ ಟ್ರಿಪ್ ಟ್ರಕಿಂಗ್ ಎಂದು ಹೋಗುವ ಮಂದಿಯೆ ಹೆಚ್ಚು ಇರುವ ಈ ಕಾಲದಲ್ಲಿ ಡಿಸಿಪಿ ಅಣ್ಣಾಮಲೈ ಕೆಲಸಗಳು, ಅವರ ಮಾತುಗಳಿಂದ ಪ್ರಭಾವಿತರಾಗಿ ತಮ್ಮ ಹಕ್ಕು ಚಲಾಯಿಸಲು ದೂರದ ಜರ್ಮನಿಯಿಂದ ಯುವಕನೊಬ್ಬ ತಾಯ್ನಾಡಿಗೆ ಹೊರಟಿದ್ದಾನೆ.ಜರ್ಮನಿಯಲ್ಲಿ ಎಂಎಸ್​ ಓದುತ್ತಿರುವ ಪ್ರೀತೇಶ್​ ಈ ನಿರ್ಧಾರ ಕೈ ಗೊಂಡಿರುವ ಯುವಕ