ಮೊಬೈಲ್​ನಲ್ಲಿ ಸೆರೆಯಾಯ್ತು ಲಾಂಗ್​​ ಮಚ್ಚುಗಳ ಅಬ್ಬರ- ಲೈವ್​ ಮರ್ಡರ್ ನೋಡೋಕೆ ಗುಂಡಿಗೆ ಗಟ್ಟಿ ಮಾಡ್ಕೊಳ್ಳಿ!

 

ಲಾಂಗ್​ ಮಚ್ಚುಗಳ ಅಬ್ಬರವನ್ನು ನೀವು ಸಿನಿಮಾದಲ್ಲಿ ನೋಡಿರ್ತಿರಾ. ಆದರೇ ಲೈವ್​​ನಲ್ಲಿ ಮಚ್ಚು-ಲಾಂಗ್​​ ಬೀಸಿ ಬರ್ಬರವಾಗಿ ಯುವಕನ ಹತ್ಯೆಗೆ ಯತ್ನ ನಡೆಸಿದ್ದನ್ನು ನೋಡಿದ್ದೀರಾ? ಅಂತಹದೊಂದು ಘಟನೆ ಬೆಂಗಳೂರಿನ ಆಡುಗೋಡಿಯ ರಾಜೇಂದ್ರ ನಗರದಲ್ಲಿ ನಡೆದಿದ್ದು, ಈ ದೃಶ್ಯ ನೋಡಿದ್ರೆ ಎಂತ ಕಲ್ಲುಗುಂಡಿಗೆಯವರ ಹೃದಯವೂ ನಡುಗೋದು ಗ್ಯಾರಂಟಿ. ಹೌದು ಕುಟುಂಬದ ಆಸ್ತಿ ವಿಚಾರಕ್ಕೆ ಎರಡು ತಂಡಗಳ ನಡುವೆ ಗಲಾಟೆ ಆರಂಭವಾಗಿದ್ದು, ಇದು ಹೊಡೆದಾಟದ ಸ್ವರೂಪ ಪಡೆದುಕೊಂಡಿದೆ. ಫಲವಾಗಿ ಮನೋಜ ಎಂಬಾತನ ಮೇಲೆ ಕಾರ್ತಿ ಅಲಿಯಾಸ್​ ಪಪ್ಪಿ ಎಂಬಾತನ ಮೇಲೆ ತನ್ನ ತಂಡದೊಂದಿಗೆ ಮುಗಿಬಿದ್ದಿದ್ದು, ಮನಬಂದಂತೆ ಹಲ್ಲೆ ಮಾಡಿ ರಕ್ತದ ಮಡುವಿನಲ್ಲಿ ಮುಳುಗಿಸಿದ್ದಾರೆ. ನಿನ್ನೆ ಮಟ-ಮಟ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರಿದ್ದರು ಯಾರು ಕೂಡ ಸಂತ್ರಸ್ತನ ಸಹಾಯಕ್ಕೆ ಹೋಗಿಲ್ಲ.

 

ಈ ಬರ್ಬರ ಹತ್ಯೆಯ ದೃಶ್ಯ ಬಿಟಿವಿ ನ್ಯೂಸ್​ಗೆ ಲಭ್ಯವಾಗಿದೆ. ಇದರಲ್ಲಿ ಮಚ್ಚುಗಳಿಂದ ಹತ್ತಾರು ಭಾರಿ ಬರ್ಬರವಾಗಿ ಹತ್ಯೆ ನಡೆಸುವ ದೃಶ್ಯ ದಾಖಲಾಗಿದೆ. ಹಲ್ಲೆಗೊಳಗಾದ ಮನೋಜ್ ಕೂಡ ಅಪರಾಧ ಪ್ರವೃತ್ತಿಯನಾಗಿದ್ದು, ಕಾರ್ತಿ ಮತ್ತು ಗುಂಪಿನ ಜೊತೆ ದ್ವೇಷ ಸಾಧಿಸುತ್ತಿದ್ದ.
ಇನ್ನು ಗಾಯಾಳು ಮನೋಜ್​ನನ್ನು ಸೇಂಟ್​ ಜಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟು ಬರ್ಬರ ಹಲ್ಲೆಗೊಳಗಾದ ಮೇಲೂ ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.