ಬಾಲಿವುಡ್​ನಲ್ಲಿ ಸದ್ದು ಮಾಡ್ತಿದೆ ಡಿಂಪಲ್​ ಲಿಪ್​ಲಾಕ್​ ಸೀನ್​! ಚಫಕ್​ ಮೂವಿ ಶೂಟಿಂಗ್ ವೇಳೆ ನಡೆದಿದ್ದೇನು ಗೊತ್ತಾ?!

ಒಂದಲ್ಲಾ ಒಂದು ವಿಷಯದಿಂದಾಗಿ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುತ್ತಾರೆ. ಒಮ್ಮೆ ತಮ್ಮ ವಿವಾಹದ ಆರತಕ್ಷತೆ ಕಾರ್ಯಕ್ರಮಗಳಿಂದ, ಮತ್ತೆ ಗಂಡನ ಜೊತೆ ರಿಯಲ್​ ಲೈಫ್​ನಲ್ಲಿ ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುವ ಮೂಲಕ, ಹೀಗೆ ನಾನಾ ಕಾರಣಗಳಿಂದಾಗಿ ಸದಾ ಸದ್ದು ಮಾಡುತ್ತಲೇ ಇರುತ್ತಾರೆ.

ad

ದೀಪಿಕಾ ಅವರು ಮದುವೆಯಾದ ಬಳಿಕ ಬಣ್ಣ ಹಚ್ಚಿರುವ ಬಹು ನಿರೀಕ್ಷಿತ ‘ಚಾಪಾಕ್​’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೂಟಿಂಗ್​ ಸೆಟ್​ನಿಂದ ದಿನಕ್ಕೊಂದು ಬ್ರೇಕಿಂಗ್​ ನ್ಯೂಸ್​ ಬರುತ್ತಿರುವುದರಿಂದ ಚಿತ್ರದ ಮೇಲೆ ಹೈಪ್​ ಕ್ರಿಯೇಟ್​ ಆಗಿದೆ. ಈ ಚಿತ್ರದಲ್ಲಿ ದೀಪಿಕಾ ನಟ ವಿಕ್ರಾಂತ್ ಮಾಸೇ ಜೊತೆ ಟೆರೆಸ್ ಮೇಲೆ ಕಿಸ್ಸಿಂಗ್ ಸೀನ್ ಮಾಡಿದ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಈ ಸಿನಿಮಾದಲ್ಲಿ ಆ್ಯಸಿಡ್​ ದಾಳಿಗೊಳಗಾಗುವ ಹುಡುಗಿಯ ಪಾತ್ರದಲ್ಲಿ ದೀಪಿಕಾ ಅಭಿನಯಿಸುತ್ತಿದ್ದು, ಇದರ ಫಸ್ಟ್​ ಲುಕ್​ನಿಂದಲೇ ಕುತೂಹಲ ಮೂಡಿಸಿದ್ದರು.  ದೀಪಿಕಾ ಟೆರೆಸ್ ಮೇಲೆ ನಿಂತು ನಟ ವಿಕ್ರಾಂತ್ ಜೊತೆ ಲಿಪ್ ಲಾಕ್ ಮಾಡುತ್ತಿದ್ದಾರೆ. ಈ ಸೀನ್ ಚಿತ್ರೀಕರಣದ ವೇಳೆ ಅಕ್ಕಪಕ್ಕದ ಮನೆಯವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

20 ಸೆಕೆಂಡ್​ ಉದ್ದದ ವಿಡಿಯೋ ತುಣುಕಿನಲ್ಲಿ ಕಟ್ಟಡದ ಛಾವಣಿ ಮೇಲೆ ಕುಳಿತು ನಟ ಮ್ಯಾಸ್ಸೆ ನಟಿ ದೀಪಿಕಾ ಅವರಿಗೆ ಚುಂಬಿಸುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ವೇಳೆ ಕಟ್ಟಡದ ಕೆಳಗೆ ನಿಂತು ಚಿತ್ರೀಕರಣ ವೀಕ್ಷಿಸುತ್ತಿದ್ದ ಜನರ ಗುಂಪು ‘ಚಿಯರ್​ ಅಪ್’​ ಮಾಡುತ್ತಿರುವುದು ಕೇಳಿಸುತ್ತದೆ. ಈಗಾಗಲೇ ಈ ಚಿತ್ರದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈಗ ಈ ಚಿತ್ರದ ಕಿಸ್ಸಿಂಗ್ ಸೀನ್ ಲೀಕ್ ಆಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.