ಬ್ಯಾಟ್​ ನಿಂದ ರಣವೀರ್​ಗೆ ಬಾರಿಸಿದ ದೀಪಿಕಾ! ಬಾಲಿವುಡ್​ ಕ್ಯೂಟ್​ ಕಪಲ್ಸ್​ ನಡುವೆ ಅಂತಹದ್ದೇನಾಯ್ತು?! ಇಲ್ಲಿದೆ ಡಿಟೇಲ್ಸ್​!!

ಹೆಂಡತಿ ಗಂಡನನ್ನು ಲಟ್ಟಣಿಗೆ ಥಳಿಸುತ್ತಾರೆ ಅನ್ನೋದು ಕಾಮನ್ ಜೋಕ್. ಆದರೆ ಬಾಲಿವುಡ್​​ನ ಮೋಸ್ಟ್​ ರೋಮ್ಯಾಂಟಿಕ್​ ಹಾಗೂ ಕ್ಯೂಟ್​ ಕಪಲ್ಸ್​ ಖ್ಯಾತಿಯ ರಣವೀರ್ ಮತ್ತು ದೀಪಿಕಾ ನಡುವೆಯೂ ಫೈಟಿಂಗ್​ ನಡೆದಿದ್ದು, ದೀಪಿಕಾ ರಣವೀರ್​​ರನ್ನು ಬ್ಯಾಟ್​ನಿಂದ ಥಳಿಸಿ ಸುದ್ದಿಯಾಗಿದ್ದಾರೆ.

ಸದಾ ರಣವೀರ್ ತನ್ನ ಪತ್ನಿ ದೀಪಿಕಾ  ಮೇಲಿನ ಕಾಳಜಿ,ಪ್ರೀತಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದರು ಆದರೀಗಾ ವಿಭಿನ್ನ ರೀತಿಯಲ್ಲಿ ಸುದ್ದಿಯಾಗಿದ್ದಾರೆ. ಅದೇನೆಂದರೆ ನಟ ರಣವೀರ್ ಸಿಂಗ್ ಗೆ ದೀಪಿಕಾ ಪಡುಕೋಣೆ ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ಹೊಡೆದಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಈ ವೀಡಿಯೋ ನೋಡಿದ ಬಾಲಿವುಡ್ ನ ಖ್ಯಾತ ನಟರೊಬ್ಬರು ಇದು ರಿಯಲ್ಲೂ ಹೌದು, ರೀಲೂ ಹೌದು… ಎಂದು ಟ್ವೀಟ್​ ಮಾಡಿದ್ದಾರೆ.ಅಷ್ಟಕ್ಕೂ ಡಿಂಪಿ ರಣವೀರ್ ಗೆ ಹೊಡೆದಿದ್ದಾರೂ ಏಕೆ ರಣವೀರ್​ ಸಿಂಗ್​ ಎಲ್ಲಾದರೂ ದಾರಿ ತಪ್ಪುತ್ತಿದ್ದರೋ ಏನೋ ಎಂಬ ಎಲ್ಲಾ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡುತ್ತಿರಬಹುದು.

ಆದರೆ ವಿಷಯ ಅದಲ್ಲ ರಣವೀರ್​ ಸಿಂಗ್​ ರವರ ಹೊಸ 83 ಎಂಬ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಭಾರತ ಮೊದಲ ಬಾರಿಗೆ 1983ರಲ್ಲಿ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಜಯಭೇರಿ ಬಾರಿಸಿತ್ತು. ಆ ವಿಷಯ ಆಧಾರಿತ ಚಿತ್ರದಲ್ಲಿ ರಣವೀರ್​ ಅವರು ಕಪಿಲ್​ದೇವ್​ ಅವರ ಪಾತ್ರ ನಿರ್ವಹಿಸುತ್ತಿದ್ದು, ದೀಪಿಕಾ ಕಪಿಲ್​ ಪತ್ನಿ ರೋಮಿ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ.

ಇನ್ನೂ ಈ ಚಿತ್ರದ ಶೂಟಿಂಗ್​ ಬ್ರಿಟನ್​ನ ಗ್ಲಾಸ್ಗೋದಲ್ಲಿ ಭರದಿಂದ ಸಾಗುತ್ತಿದ್ದು, ಚಿತ್ರೀಕರಣದ ಬಿಡುವಿನ ಸಮಯದಲ್ಲಿ ದೀಪಿಕಾ ಕೈಗೆ ಸಿಕ್ಕ ಬ್ಯಾಟ್​ ಹಿಡಿದು ಪತಿ ರಣವೀರ್​ ಸಿಂಗ್​ ಅವರನ್ನೇ ಚೆಂಡು ಎಂದು ಭಾವಿಸಿ ಬ್ಯಾಟ್​ ಬೀಸಿದ್ದಾರೆ.  ಜೊತೆಗೆ ಪತ್ನಿಯಿಂದ ಪೆಟ್ಟು ತಿಂದ ರಣವೀರ್​ ಎದ್ದೆದ್ದು ಕುಣಿಯುತ್ತಿದ್ದಾರೆ. ಈ ಹಾಸ್ಯದ ದೃಶ್ಯವನ್ನು ರಣವೀರ್​ ಸಿಂಗ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.