ಮೆಟಲ್​ ಡಿಟೆಕ್ಟರ್​ ಕೈಕೊಟ್ಟಿದ್ದೇ ಚಾಕು ಇರಿತಕ್ಕೆ ಕಾರಣವಾಯ್ತಾ?

Details On Lokayuktha Justice Vishwanath Shetty Stabbed issue

ಹಾಡಹಗಲೇ ನಡೆದ ಲೋಕಾಯುಕ್ತರ ಮೇಲಿನ ಹಲ್ಲೆ ಪ್ರಕರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯವನ್ನು ಎತ್ತಿ ತೋರಿಸುವಂತಿದ್ದು, ಘಟನೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ad


ವಿಧಾನಸೌಧದ ಕೂಗಳತೆ ದೂರದಲ್ಲೇ ಇರುವ ಲೋಕಾಯುಕ್ತ ಕಚೇರಿಯಲ್ಲೇ ಭದ್ರತೆಗೆ ಪೊಲೀಸರು ಇರುವ ಸಂದರ್ಭದಲ್ಲೇ ಲೋಕಾಯುಕ್ತರ ಮೇಲೆ ಹಲ್ಲೆ ನಡೆದಿರೋದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಲೋಕಾಯುಕ್ತ ಕಚೇರಿಯಲ್ಲಿ ಭದ್ರತಾ ವೈಫಲ್ಯವಿದೆ. ಅಲ್ಲಿರುವ ಮೆಟಲ್​ ಡಿಟೆಕ್ಟರ್​ ಏನು ಕೆಲಸ ಮಾಡುತ್ತಿಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.  ಲೋಕಾಯುಕ್ತ ಕಚೇರಿ ಒಳಗೆ ತೆರಳುವ ಮುನ್ನ ಮೆಟಲ್​ ಡಿಟೆಕ್ಟರ್​​ನಲ್ಲಿ ಹಾದು ಹೋಗಬೇಕು. ಆದರೇ ಕೆಲದಿನದಿಂದ ಈ ಮೆಟಲ್​ ಡಿಟೆಕ್ಟರ್​ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಆರೋಪಿ ತೇಜೇಶ್ ಶರ್ಮಾ​ ಚಾಕು ಸಮೇತ ನಿರಾತಂಕವಾಗಿ ಲೋಕಾಯುಕ್ತ ಕಚೇರಿ ಒಳಕ್ಕೆ ಸಾಗೋದು ಸಾಧ್ಯವಾಗಿದೆ.

ಪ್ರಕರಣವೊಂದರ ವಿಚಾರಣೆಗೆ ಬಂದ ತೇಜೇಶ್ ಶರ್ಮಾ ​ನಿಗೆ ವಿಶ್ವನಾಥ ಶೆಟ್ಟಿ ಮೇಲೆ ಆಕ್ರೋಶವಿತ್ತು ಎನ್ನಲಾಗಿದೆ. ಹೀಗಾಗಿ ಆತ ಚಾಕು ಸಮೇತವೇ ಕಚೇರಿಗೆ ಆಗಮಿಸಿದ್ದ. ಕನಿಷ್ಠ ಲೋಕಾಯುಕ್ತ ಚೇಂಜರ್​ ಹೊರಭಾಗದಲ್ಲಿರುವ ಪೊಲೀಸರಾದ್ರೂ ಈತನನ್ನು ಪರಿಶೀಲಿಸಿ ಒಳಕ್ಕೆ ಕಳಿಸಿದ್ದರೇ ಘಟನೆ ತಡೆಯಬಹುದಿತ್ತು.  ಆದರೇ ಯಾರೂ ಕೂಡ ಸೂಕ್ತವಾಗಿ ಪರಿಶೀಲನೆ ಮಾಡದ ಹಿನ್ನೆಲೆಯಲ್ಲಿ ಘಟನೆ ನಡೆದಿದ್ದು, ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ರಾಜ್ಯದ ಭದ್ರತಾ ವೈಫಲ್ಯ ಬೀದಿಗೆ ಬಂದಂತಾಗಿದೆ. ವಿಧಾನಸೌಧದ ಕೂಗಳತೆ ದೂರದಲ್ಲೇ ಈ ರೀತಿ ಘಟನೆ ನಡೆದಿದ್ದು, ಭದ್ರತಾ ವೈಫಲ್ಯವಲ್ಲದೇ ಮತ್ತೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಗೃಹಸಚಿವರು ಹಾಗೂ ರಾಜ್ಯ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು ಆತನ ವಿಚಾರಣೆ ನಡೆದಿದೆ.