ಭಾರತದ ಸಂವಿಧಾನ ಬದಲಾಗಬೇಕು- ಪೇಜಾವರಶ್ರೀ

ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ಒಂದು ಕಾನೂನು ಹಾಗೂ ಬಹುಸಂಖ್ಯಾತರಿಗೆ ಒಂದು ಕಾನೂನಿದೆ. ಹೀಗಿದ್ದರೇ ಭಾರತ ಜಾತ್ಯಾತೀತವಾಗಲು ಹೇಗೆ ಸಾಧ್ಯ? ಹೀಗಾಗಿ ದೇಶದಲ್ಲಿ ಏಕತೆ ಮೂಡಿಸುವ ನಿಟ್ಟಿನಲ್ಲಿ ಭಾರತದ ಸಂವಿಧಾನ ಬದಲಾಗಬೇಕು ಎಂದು ಉಡುಪಿ ಕೃಷ್ಣಮಠದ ಪೇಜಾವರಶ್ರೀ ಅಭಿಪ್ರಾಯಿಸಿದ್ದಾರೆ. ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸತ್ತಿನಲ್ಲಿ ಪಾಲ್ಗೊಂಡು ಮಾತನಾಡಿದ ಪೇಜಾವರಶ್ರೀ ಬಹುಸಂಖ್ಯಾತರನ್ನು ವಿರೋಧಿಸಲು ನಾನು ಈ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಭಾರತ ಸಂವಿಧಾನವನ್ನು ಬದಲಾಯಿಸಬೇಕು ಎಂದರು.

ಇದೇ ವೇಳೆ ಮಾತನಾಡಿದ ಪೇಜಾವರಶ್ರೀ  ಒಂದು ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತದೆ.  2019ರ ಒಳಗೆ ರಾಮ ಮಂದಿರ ಆಗೂದು ನಿಶ್ಚಿತ. ಭಾರತದಲ್ಲಿ ಈಗ ವಾತಾವರಣ ಚೆನ್ನಾಗಿದೆ . ಇದಕ್ಕೆ ಕೃಷ್ನನ ಅನುಗ್ರಹ ಇದೆ ಅಂತ ಪೇಜಾವರ ವಿಶ್ವೇಶತೀರ್ಥರು ಹೇಳಿದರು. ಅಲ್ಲದೆ ಉಡುಪಿಯಲ್ಲಿ ಕ್ಷೀರ ಮಂಥನವಾಗುತ್ತಿದೆ. ಇದು ಧರ್ಮಸಂಸದ್ ಮಾತ್ರ ಅಲ್ಲ. ಇದು ಕ್ಷೀರ ಸಮುದ್ರದ ಮಂಥನ . ಅಸ್ಪೃಷ್ಯತೆ ಎಂಬುದು ಕಾಲಕೂಟ ವಿಷ ಸರ್ಪ. ಅದರ ಉಚ್ಛಾಟನೆ ಮೊದಲು ಹಿಂದೂಗಳಲ್ಲಿ ಆಗಬೇಕಿದೆ. ರಾಜ್ಯಗಳಲ್ಲಿ ಗೋ ಹತ್ಯೆ ಜಾರಿಗೆ ತರುವ ಸರ್ಕಾರ ಬರಬೇಕು ಎಂದು ಸ್ವಾಮೀಜಿ ಆಶಿಸಿದ್ದಾರೆ. ಸಂವಿಧಾನ ಬದಲಾಯಿಸಬೇಕೆಂಬ ಪೇಜಾವರಶ್ರೀಗಳ  ಹೇಳಿಕೆ ದೇದಾದ್ಯಂತ ಪರ-ವಿರೋಧ ಚಳುವಳಿ ಹುಟ್ಟು ಹಾಕುವ ಸಾಧ್ಯತೆ ಇದೆ.

Watch Here: https://youtu.be/kV4mJqRTX9c

4 ಕಾಮೆಂಟ್ಗಳನ್ನು

  1. […] ನಡೆಯುತ್ತಿರುವ ಧರ್ಮಸಂಸತ್ತಿನಲ್ಲಿ ಹಲವು ವಿವಾದಗಳು ಹುಟ್ಟಿಕೊಂಡಿವೆ. ಒಂದೆಡೆ ಪೇಜಾವರಶ್ರೀ […]

ಪ್ರತ್ಯುತ್ತರ ನೀಡಿ

Please enter your comment!
Please enter your name here