ಪ್ರಧಾನಿ ಮೋದಿಗೆ ಕರ್ನಾಟಕದವರೇ ಸಾರಥಿ -‌ದೆಹಲಿಯಿಂದ ಕರ್ನಾಟಕಕ್ಕೆ ‌ಬಂದ ‌ಪ್ರಧಾನಿ ‌ಮೋದಿ ‌ವಾಹನ ‌ಚಾಲಕ‌.

ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕ್ಷಣಗಣನೆ ಪಿಎಂ ದೇವಳ ನಗರಿ ಧರ್ಮಸ್ಥಳ ಭೇಟಿಗೆ ಕೌಂಟ್​ಡೌನ್ ಪ್ರಧಾನಿ ಸ್ವಾಗತಿಸಲು ಸಜ್ಜುಗೊಂಡಿದೆ ದೇವಳ ನಗರಿ ಧರ್ಮಸ್ಥಳ ಮದುವಣಗಿತ್ತಿಯಂತೆ ಸಿಂಗಾರಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ 10.30ಕ್ಕೆ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಪ್ರಧಾನಿ ಆಗಮನ 11 ಗಂಟೆಗೆ ಹೆಲಿಕಾಪ್ಟರ್​ ಮೂಲಕ ಧರ್ಮಸ್ಥಳಕ್ಕೆ ಮೋದಿ ಆಗಮನ ಕರ್ನಾಟಕದಲ್ಲಿ ಪ್ರಧಾನಿ ಮೋದಿಯವರ ಸಾರಥಿ ಯಾರು ಗೊತ್ತಾ? ಪ್ರಧಾನಿ ನರೇಂದ್ರ ಮೋದಿಯನ್ನು ಸುತ್ತಾಡಿಸಲಿರುವ ಡ್ರೈವರ್ ಯಾರು? ಪ್ರಧಾನ ಮಂತ್ರಿಯ ಕಾರಿನ ಚಾಲಕ ಕರ್ನಾಟಕ ಮೂಲದವರು ದೆಹಲಿಯಿಂದ ಕರ್ನಾಟಕಕ್ಕೆ ‌ಬಂದ ‌ಪ್ರಧಾನಿ ‌ಮೋದಿ ‌ವಾಹನ ‌ಚಾಲಕ‌ ‌ಚಾಮರಾಜನಗರದ ಮಾರಪ್ಪ, ಪ್ರಧಾನಿ ‌ಮೋದಿ ‌ವಾಹನ ‌ಚಾಲಕ‌ ಎಸ್​ಪಿಜಿ ‌ಸಿಬ್ಬಂದಿಯಾಗಿರುವ ಚಾಮರಾಜನಗರದ ‌ಮಾರಪ್ಪ ದೆಹಲಿಯಿಂದ ‌ನಿನ್ನೆ ಮಧ್ಯಾಹ್ನವೇ ಧರ್ಮಸ್ಥಳಕ್ಕೆ ‌ಬಂದಿಳಿದ ಮಾರಪ್ಪ.

ad


ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಮೋ ಆಗಮಿಸ್ತಾ ಇದ್ದು, ಪಿಎಂ ಸ್ವಾಗತಕ್ಕೆ ದೇವಳ ನಗರಿ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರಕ್ಕೆ ಆಗಮಿಸ್ತಾ ಇರುವ ಮೋದಿ, ಬೆಳಗ್ಗೆ 10.30ಕ್ಕೆ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸ್ತಾ ಇದಾರೆ. ನಂತ್ರ 11 ಗಂಟೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ಧರ್ಮಸ್ಥಳಕ್ಕೆ ಬರಲಿದ್ದಾರೆ. 11.30ರವರೆಗೆ ಶ್ರೀ ಮಂಜುನಾಥನ ದರ್ಶನ ಪಡೆಯಲಿರುವ ನಮೋ, 11.40ರಿಂದ 12.40ರವರೆಗೆ ಉಜಿರೆಯಲ್ಲಿ ನಡೆಯುವ ಮೆಗಾ ಱಲಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯೋಜನೆಯಲ್ಲಿ ತೆರೆದಿರುವ 12 ಲಕ್ಷ ಜನ್ ಧನ್ ಖಾತೆಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡ್ತಾರೆ. ಇದೇ ವೇಳೆ ಖಾತೆದಾರರಿಗೆ ನಮೋ 12 ಲಕ್ಷ ರುಪೇ ಕಾರ್ಡ್​ ವಿತರಿಸಲಿದ್ದಾರೆ. ಬಳಿಕ ಜನರನ್ನುದ್ದೇಶಿ ನಮೋ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 12.50ಕ್ಕೆ ಉಜಿರೆಯಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಮಧ್ಯಾಹ್ನ 2.10ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ.

ಇನ್ನು ನಮೋ ಧರ್ಮಸ್ಥಳಕ್ಕೆ ಆಗಮಿಸ್ತಾ ಇರೋ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೊಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರ ಭೀತಿ ಇರೋದ್ರಿಂದ ಧರ್ಮಸ್ಥಳ ಸುತ್ತಾಮುತ್ತ ಹೈಅಲರ್ಟ್​ ಮಾಡಲಾಗಿದೆ.   ಮೋದಿ ಸಾಗುವ ರಸ್ತೆಯ ಪ್ರತಿ ಕಿಲೋಮೀಟರ್​ಗೆ 40 ಪೊಲೀಸರು, ಇಬ್ಬರು ಸಬ್ ಇನ್ಸ್ ಪ್ಟೆಕ್ಟರ್ ನಿಯೋಜಿಸಲಾಗಿದೆ. ರಸ್ತೆಯುದ್ದಕ್ಕೂ ಪೊಲೀಸರು ಸರತಿಯಲ್ಲಿ ನಿಲ್ಲಲಿದ್ದಾರೆ. ರಸ್ತೆಯಲ್ಲಿ ತ್ರಿ ಲೇಯರ್ ಸೆಕ್ಯೂರಿಟಿ ಇರಲಿದ್ದು, ಮೊದಲ ಲೇಯರ್​ನಲ್ಲಿ ಸಿವಿಲ್ ಪೊಲೀಸರು, ಎರಡನೇ ಲೇಯರ್​ನಲ್ಲಿ ಎಎನ್​ಎಫ್ ಪೊಲೀಸರು, ರಸ್ತೆಯ ಇಕ್ಕೆಲಗಳ ಕಾಡಿನಲ್ಲಿ ಒಂದು ಲೇಯರ್ ಎಎನ್​ಎಫ್ ಪೊಲೀಸರನ್ನು ನೇಮಿಸಲಾಗಿದೆ. ಮೋದಿ ರಸ್ತೆ ಮೂಲಕ ಸಾಗುವಾಗ ಇಕ್ಕೆಲಗಳ ಕಾಡಿನಲ್ಲಿ ನಕ್ಸಲ್ ಕೂಂಬಿಂಗ್ ನಡೆಯುತ್ತ ಇರುತ್ತೆ. 10 ಎಸ್ಪಿಗಳು, 150 ಡಿ.ಎಸ್.ಪಿ ಲೆವೆಲ್ ಅಧಿಕಾರಿಗಳು, 2500 ಪೊಲೀಸರ ನಿಯೋಜಿಸಲಾಗಿದೆ.

 1 ಕಾಮೆಂಟ್

  1. ನಿಜವಾಗಿಯೂ ನಮ್ಮ ಚಾಮರಾಜನಗರದ ಜನರಿಗೆ ಹೆಮ್ಮೆ ಪಡುವ ವಿಷಯ

Comments are closed.