ದಲಿತರಿಗೆ ಮೇವಾನಿ ಆದರ್ಶವಾಗಬಾರದು, ಮುಸ್ಲೀಮರಿಗೆ ತಿಪ್ಪೇ ಸುಲ್ತಾನ್ ಆದರ್ಶವಲ್ಲ !! ಇದು ಹೊಸ ರಾಜಕಾರಣಿ ಬಿಗ್ ಬಾಸ್ ಪ್ರಥಮ್ ಸೂತ್ರ !!

ಬಿಗ್ ಬಾಸ್ ವಿನ್ನರ್, ಸ್ವಯಂಘೊಷಿತ ಒಳ್ಳೆ ಹುಡುಗ ಪ್ರಥಮ್ ರಾಜಕೀಯಕ್ಕೆ ಬರುತ್ತಿದ್ದಾರೆ.

 ರಾಜಕೀಯಕ್ಕೆ ಬರುತ್ತೇನೆ ಎಂದು ಘೋಷಿಸುವುದರ ಜೊತೆಗೆ ಯಾರು ಯಾರಿಗೆ ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂಬ ಸೂತ್ರವನ್ನು ಮುಂದಿಟ್ಟಿದ್ದಾರೆ. ಹೌದು. ಬಿಗ್​​ಬಾಸ್​ ನಾಲ್ಕನೇ ಸೀಸನ್​​ ವಿನ್ನರ್​​​ ಪ್ರಥಮ್​​​​ ರಾಜಕೀಯಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಸ್ವತಃ ಒಳ್ಳೆ ಹುಡುಗ ಪ್ರಥಮ್​​ ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ. ನಿನ್ನೆ ಧಾರವಾಡದಲ್ಲಿ ಮಾತ್ನಾಡಿದ ಪ್ರಥಮ್​​​ ಹನೂರು ಹೊಸ ತಾಲೂಕಾಗಿದೆ. ಅಲ್ಲಿಗೆ ಪ್ರಥಮ ಎಂಎಲ್​​ಎ ನಾನೇ ಆಗ್ಬೇಕು ಅನ್ನೋದು ಆಸೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಬಳಿಯೂ ಚರ್ಚೆ ಮಾಡಿದ್ದೇನೆ.

ಯಾವುದಾದರೂ ಪಕ್ಷದಿಂದ ಕಣಕ್ಕಿಳಿಯುತ್ತೇನೆ. ಇಲ್ದೇ ಹೋದ್ರೆ ಪಕ್ಷೇತರನಾಗಿ ಸ್ಪರ್ಧೆ ಮಾಡ್ತೀನಿ ಅಂದಿದ್ದಾರೆ. ಇಷ್ಟಕ್ಕೇ ಪ್ರಥಮ್​​ ಮಾತು ನಿಲ್ಲೋದಿಲ್ಲ.. ಕರಾವಳಿಯ ನೈತಿಕ ಪೊಲೀಸ್​ ಗಿರಿ, ದಲಿತರ ಹೋರಾಟ, ಟಿಪ್ಪು ಜಯಂತಿ ಹೀಗೆ ನಾನಾ ವಿಚಾರಗಳ ಬಗ್ಗೆಯೂ ಮಾತ್ನಾಡಿದ್ರು. ” ನೀವು ದಲಿತರಾ ? ಹಾಗಾದರೆ ಅಂಬೇಡ್ಕರ್ ನಿಮ್ಮ ಆದರ್ಶವಾಗಿರಲಿ.‌ ಬದಲಾಗಿ ಜಿಗ್ನೇಶ್ ಮೇವಾನಿ ಅಲ್ಲ. ನೀವು ಮುಸ್ಲಿಂ ಆಗಿದ್ದರೆ ಅದ್ಯಾವುದೋ ತಿಪ್ಪೇ ಸುಲ್ತಾನ್ ನಿಮ್ಮ ಆದರ್ಶ ಆಗಿರದೆ, ಡಾ ಎಪಿಜೆ ಅಬ್ದುಲ್ ಕಲಾಂ ನಿಮ್ಮ ಆದರ್ಶವಾಗಲಿ” ಎಂದಿದ್ದಾರೆ.