ಗೌರಿ ಲಂಕೇಶ್ ನಿವಾಸಕ್ಕೆ ಪ್ರಗತಿಪರ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ನಿವಾಸಕ್ಕೆ ಬೆಳಗಾವಿ, ಬಾಗಲಕೋಟೆ, ಧಾರವಾಡದಿಂದ ಬಂದಿರುವ ಸ್ವಾಮೀಜಿಗಳು ಭೇಟಿ ಕೊಟ್ಟಿದ್ದಾರೆ. ಗೌರಿ ಲಂಕೇಶ್​ ಪ್ರಗತಿಪರ ಚಿಂತನೆಗಳ ಮೂಲಕ ಮನೆ ಮಾತಾಗಿದ್ರು.ಗೌರಿ ಲಂಕೇಶ್ ಅವರ ಹಾದಿಯಾಗಿ ನಾವು ಹೋರಾಡುತ್ತಿದ್ದೇವೆ. ವಿಚಾರವಾದಿಗಳ ಹಂತಕರಿಗೆ ದೊಡ್ಡ ಶಿಕ್ಷೆಯಾಗಲೇಬೇಕು ಅಂತ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.

ಈ ಮಧ್ಯೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಗತಿ ಪರಮುಖಂಡರು ತುರ್ತು ಸಭೆ ನಡೆಸ್ತಿದಾರೆ. ಎಸ್​ಐಟಿ ತನಿಖಾಧಿಕಾರಿ ಐಜಿಪಿ ಬದಲಾವಣೆ ಹಾಗೂ ಕೆಂಪಯ್ಯರನ್ನು ದೂರವಿಡುವ ಬಗ್ಗೆ ಚರ್ಚೆ ನಡೆಸ್ತಿದಾರೆ
============
ಇನ್ನು ಘಟನೆಯ ದೃಶ್ಯ ಗೌರಿ ಮನೆಯ 2 ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 1 ಕ್ಯಾಮರಾದಲ್ಲಿ ಗೌರಿ ಹೊಟ್ಟೆ ಹಿಡಿದುಕೊಂಡು ಹಿಂದೆ ಹೆಜ್ಜೆ ಹಾಕೋ ದೃಶ್ಯ ಸೆರೆಯಾಗಿದ್ರೆ, ಮತ್ತೊಂದು ಕ್ಯಾಮರಾದಲ್ಲಿ ಸಂಪೂರ್ಣ ಘಟನೆ ರೆಕಾರ್ಡ್ ಆಗಿದೆ. ಗೌರಿ ಲಂಕೇಶ್, ಕಾರು ನಿಲ್ಲಿಸಿ ಗೇಟ್ ತೆಗೆಯಲು ಮುಂದಾಗೊ ವೇಳೇ ಕಾರಿನ ಹಿಂಬದಿಯಿಂದ ಬೆಳಕು ಕಂಡು ಬರುತ್ತೆ. ಆ ಬೆಳಕು ಬೈಕ್ ಅಥವಾ ಸ್ಕೂಟರ್​ನದ್ದೇ ಇರುವ ಸಾಧ್ಯತೆ ಇದೆ.
ಬೆಳಕು ಕಂಡ ಬಳಿಕ ಕೆಲವೇ ಸೆಕೆಂಡ್​ಗಳಲ್ಲಿ ಕತ್ತಲ್ಲಲ್ಲಿ ಬೆಂಕಿಯ ಕಿಡಿ ಕಾಣಿಸುತ್ತೆ. ಒಟ್ಟು ನಾಲ್ಕು ಬಾರಿ ಸ್ಫೋಟಗೊಳ್ಳುವ ಬೆಂಕಿ ಕಿಡಿ ಕಾಣಿಸಿದ್ದು, ಆ ಬೆಂಕಿಯ ಕಿಡಿ ಹಂತಕ ಗೌರಿ ಲಂಕೇಶ್ ಮೇಲೆ ಹಾರಿಸಿರೋ ಗುಂಡಿನದ್ದು ಎಂದು ತಿಳಿದು ಬಂದಿದೆ. ಗುಂಡೇಟು ತಿಂದ ಬಳಿಕ ನೆಲಕ್ಕೆ ಗೌರಿ ಲಂಕೇಶ್​ ಗುಂಡು ಹಾರಿಸಿದ ಹಂತಕ ಯಾವ ಗಾಬರಿಯೂ ಇಲ್ಲದೆ ನಡೆದು ಹೋಗುತ್ತಾನೆ.
====================
ಗೌರಿ ಲಂಕೇಶ್ ಹತ್ಯೆ ಸಂಬಂಧ ಪ್ರಮುಖವಾಗಿ ವೈಚಾರಿಕ ಭಿನ್ನಾಭಿಪ್ರಾಯಗಳು ಹಾಗೂ ನಕ್ಸಲ್ ಹೋರಾಟದ ಆಯಾಮಗಳಲ್ಲಿ ತನಿಖೆ ನಡೆಸಲಾಗ್ತಿದೆ. ಗೌರಿ ಲಂಕೇಶ್​ ತಮ್ಮ ಇಂದ್ರಜೀತ್​ ಲಂಕೇಶ್​ ನಕ್ಸಲರ ಮೇಲೆಯೇ ಆರೋಪ ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ. ಆಲ್ದೆ, ಗೌರಿ ಲಂಕೇಶ್​ ಪತ್ರಿಕಾ ಕಚೇರಿಗೆ ನಕ್ಸಲರ ಕಡೆಯಿಂದ ಕೆಲ ದಿನಗಳ ಹಿಂದೆ ಬೆದರಿಕೆ ಪತ್ರ ಬಂದಿತ್ತು ಅಂತಾ ತಿಳಿದು ಬಂದಿದೆ. ಜತೆಗೆ ಗೌರಿ ಲಂಕೇಶ್​ ಮನೆಗೆ ಕಳೆದ 15 ದಿನಗಳ ಹಿಂದಷ್ಟೇ ಸಿಸಿಟಿವಿ ಅಳವಡಿಸಿದ್ದಾರೆ. ಇದು ಗೌರಿಯವರಿಗೆ ಮೊದಲೇ ಅಟ್ಯಾಕ್​ ಮಾಡುವ ಮೂನ್ಸೂಚನೆ ಇತ್ತಾ ಅನ್ನುವುದರ ಬಗ್ಗೆಯೂ ತನಿಖೆ ಚುರುಕುಗೊಳಿಸಲಾಗಿದೆ.
======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here