ಜನ ತಮಗೆ ಹುಷಾರ್​ ಇಲ್ಲ ಅಂದ್ರೆ ಆಸ್ಪತ್ರೆಗಳ ಮೊರೆ ಹೋಗ್ತಾರೆ.ಆದ್ರೆ ರೋಗಿಗಳ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಡಯೋಗ್ನಾಸ್ಟಿಕ್ ಸೆಂಟರ್​​ಗಳು ಜನಸಾಮಾನ್ಯರ ಆರೋಗ್ಯದ ಜತೆ ಚೆಲ್ಲಾಟವಾಡಿದ್ದಾರೆ.ಆನೇಕಲ್ ಪಟ್ಟಣದ ಡಯಾಗ್ನಾಸ್ಟಿಕ್​ವೊಂದ್ರಲ್ಲಿ ಮಹಿಳೆಗೆ ಪ್ಲೇಟ್​ಲೆಟ್​ ಕೌಂಟ್​ ಮಾಡಿಸಿದ್ದಾರೆ. ಆಗ ಮಹಿಳೆಯ ದೇಹದಲ್ಲಿ ಕೇವಲ 35,000 ಸಾವಿರ ಪ್ಲೇಟ್‍ಲೆಟ್‍ಗಳಿವೆ ಅಂತಾ ರಿಪೋರ್ಟ್ ನೀಡಿದ್ದಾರೆ. ಇದರಿಂದ ಕಂಗಾಲಾದ ಕುಟುಂಬಸ್ಥರು, ಬೇರೆ ಡಯಾಗ್ನಾಸ್ಟಿಕ್​ನಲ್ಲಿ ಚೆಕಪ್​​ ಮಾಡಿಸಿದಾಗ 3,75,000 ಸಾವಿರ ಪ್ಲೇಟ್​ಲೆಟ್​​ ಇದೆ ಅಂತಾ ರಿಪೋರ್ಟ್ ನೀಡಿದ್ದಾರೆ. ನಕಲಿ ಡಯೋಗ್ನಾಸ್ಟಿಕ್ ಸೆಂಟರ್ ವಿರುದ್ಧ ಆಕ್ರೋಶಗೊಂಡ ಪೋಷಕರು ಡಯೋಗ್ನಾಸ್ಟಿಕ್ ಸೆಂಟರ್ ಮೇಲೆ ದಾಳಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here