ಮಹದಾಯಿ ಹೋರಾಟಗಾರರ ಸಭೆ ಕರೆದು, ಸಭೆ ನಡೆಸದೇ ರಾಹುಲ್ ದೆಹಲಿಗೆ..

Congress party Vice President Rahul Gandhi during Rally for six UPA candidates of Mumbai at MMRDA ground in BKC on Sunday. Express photo by Prashant Nadkar, Mumbai, 20/04/2014

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹದಾಯಿ ಹೋರಾಟಗಾರರ ಸಭೆ ಕರೆದಿದ್ದ ರಾಹುಲ್​​​ಗಾಂಧಿ ಅವ್ರನ್ನ ಭೇಟಿಯಾಗದೆಯೇ ದೆಹಲಿಗೆ ವಾಪಸ್​ ಆಗಿದ್ದಾರೆ. ಇದ್ರಿಂದ ಸಿಟ್ಟೆದ್ದ ಹೋರಾಟಗಾರರು ಹುಬ್ಬಳ್ಳಿ ವಿಮಾನ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ರು. ಆರ್​.ಬಿ. ತಿಮ್ಮಾಪುರ ಕಾರು ತಡೆದು ಕಿಡಿಕಾರಿದ್ರು.

ad


 

ಮುಂಬೈ ಕರ್ನಾಟಕದಲ್ಲಿ ಮೂರುದಿನಗಳ ಪ್ರವಾಸ ಕೈಗೊಂಡಿದ್ದ ರಾಹುಲ್​​ ಗಾಂಧಿಗೆ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೋರಾಟಗಾರರು ಪ್ರತಿಭಟನೆ ನಡೆಸ್ತಿದ್ರು. ಈ ಹಿನ್ನೆಲೆಯಲ್ಲಿ ಮೊನ್ನೆ ಬೆಳಗಾವಿಯ ಸವದತ್ತಿಯಲ್ಲಿ ಮಾತನಾಡಿದ್ದ ರಾಹುಲ್​​, ಇವತ್ತು ಕಾಟನ್ ಕೌಂಟಿ ಕ್ಲಬ್​ನಲ್ಲಿ ಹೋರಾಟಗಾರರ ಸಭೆ ಕರೆದಿದ್ರು. ಆದ್ರೆ, ಹೋರಾಟಗಾರರೊಂದಿಗೆ ಸಭೆ ನಡೆಸದೆಯೇ ರಾಹುಲ್​​ ಗಾಂಧಿ ದೆಹಲಿಗೆ ಹಿಂದುರಿಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.