ತುಮಕೂರಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜೊತೆ ಕೈ ಜೋಡಿಸಿದ್ರಾ ಸೊಗಡು ಶಿವಣ್ಣ?!

 

ad

ವಿಧಾನಸಭಾ ಚುನಾವಣೆಯಲ್ಲಿನ ಟಿಕೇಟ್​ ಹಂಚಿಕೆ ರಾಜ್ಯದ ಹಲವೆಡೆ ಅಸಮಧಾನ ಸ್ಪೋಟಕ್ಕೆ ಕಾರಣವಾಗಿದೆ. ಹೀಗಾಗಿ ಕೆಲವೆಡೆ ಬಿಜೆಪಿ ಹೈಕಮಾಂಡ್ ಅಸಮಧಾನ ಶಮನಕ್ಕೂ ಸಿದ್ಧತೆ ನಡೆಸಿದೆ. ಹೀಗಿರುವಾಗಲೇ ಕಲ್ಪತರ ನಾಡು ತುಮಕೂರಿನಲ್ಲಿ ಬಿಜೆಪಿ-ಕಾಂಗ್ರೆಸ್​ ಕೈ ಜೋಡಿಸಿದ್ಯಾ ಅನ್ನೋ ಅನುಮಾನ ಸೃಷ್ಟಿಯಾಗಿದೆ. ಹೌದು ನನ್ನ ಕ್ಷೇತ್ರದಲ್ಲಿ ನನಗೆ ಬಿಜೆಪಿ ಅಭ್ಯರ್ಥಿಯಿಂದ ಸಹಕಾರ ಸಿಗ್ತಿದೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ.

 

ಹೌದು ತುಮಕೂರು ನಗರ ಕಾಂಗ್ರೆಸ್​​​ ಅಭ್ಯರ್ಥಿ ರಫೀಕ್​ ಅಹ್ಮದ್​ ಇಂತಹದೊಂದು ಸ್ಪೋಟಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಬಿಜೆಪಿಯಿಂದ ಟಿಕೇಟ್​ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣಗೆ ಬಿಜೆಪಿ ನಿರಾಸೆ ಮಾಡಿದ್ದು, ಸೊಗಡು ಶಿವಣ್ಣ ಹಾಗೂ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸೊಗಡು ಶಿವಣ್ಣಗೆ ನೀಡಬೇಕಾಗಿದ್ದ ಟಿಕೇಟ್​ ಜ್ಯೋತಿಗಣೇಶ್​ ಪಾಲಾಗಿರೋದರಿಂದ ಸೊಗಡು ಶಿವಣ್ಣ ಸ್ವಪಕ್ಷಿಯ ಅಭ್ಯರ್ಥಿ ಸೋಲಿಸೋಕೆ ಪಣ ತೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಇದೀಗ ನನಗೆ ಬಿಜೆಪಿ ಕ್ಯಾಂಡಿಡೇಟ್​ ಸಪೋರ್ಟ್​ ಇದೆ ಎಂದು ಕಾಂಗ್ರೆಸ್​ ಅಭ್ಯರ್ಥಿ ರಫೀಕ್​ ಅಹ್ಮದ್​ ಹೇಳಿದ್ದಾರೆ. ಮಾಜಿ ಸಚಿವ ಸೊಗಡು ಶಿವಣ್ಣ ಆಶಿರ್ವಾದ ನನ್ನ ಮೇಲಿದೆ. ಬಿಜೆಪಿಯವರ ಸಹಕಾರದಿಂದ ನಾನು ಮತ್ತೊಮ್ಮೆ ಹೆಚ್ಚಿನ ಅಂತರದಲ್ಲಿ ಗೆದ್ದು ಬರುತ್ತೇನೆ ಎಂದಿದ್ದಾರೆ. ಹೀಗಾಗಿ ಜ್ಯೋತಿ ಗಣೇಶ್ ಸೋಲಿಗೆ ಸೊಗಡು ಶಿವಣ್ಣ ಸಾಥ್​ ನೀಡ್ತಿದ್ದಾರಾ ಅನ್ನೋ ಅನುಮಾನ ಮೂಡಿದ್ದು, ಇದಕ್ಕೆ ರಫೀಕ್ ಅಹ್ಮದ್​ ಹೇಳಿಕೆ ಪೂರಕವಾಗಿದೆ.