ಸಿಎಂ ಹುದ್ದೆ ಆಸೆಗೆ ಕಾಂಗ್ರೆಸ್​​ಗೆ ಕೈ ಕೊಟ್ರಾ ಸಚಿವರು ?- ಪಾರ್ಟಿ ಫಂಡ್​ ಗುಳುಂ ಮಾಡಿದ ಸಚಿವ ಮಹದೇವಪ್ಪ!

 

ad


ಇನ್ನೇನು ರಾಜ್ಯದಲ್ಲಿ ಚುನಾವಣೆ ಮುಗಿದು ಮತ ಎಣಿಕೆಗೆ ಕ್ಷಣಗಣನೆ ನಡೆದಿದೆ. ಹೀಗಿರುವಾಗಲೇ, ಕರ್ನಾಟಕದ ಕುರುಕ್ಷೇತ್ರದಲ್ಲೇ ಸುನಾಮಿ ಎಬ್ಬಿಸೋ ಸುದ್ದಿಯೊಂದು ಬಿಟಿವಿನ್ಯೂಸ್​ಗೆ ಲಭ್ಯವಾಗಿದೆ. ಇದು ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವ ಸುದ್ದಿ. ಹೌದು ಸಿಎಂ ಆಗೋ ಆಸೆಯಿಂದ ಸಚಿವ ಎಚ್.ಸಿ.ಮಹದೇವಪ್ಪ, ತಮ್ಮ ಪಕ್ಷದ ನಾಯಕರಿಗೆ ಮೋಸ ಮಾಡಿದ್ರು ಅನ್ನೋ ಮಹತ್ವದ ಸುದ್ದಿಯೊಂದು ಬಯಲಿಗೆ ಬಂದಿದೆ.

 

ಹೌದು ಸಿಎಂ ಆಗೋ ಆಸೆಯಿಂದ ದೇವೆಗೌಡರ್​ ಸಂಪರ್ಕಕ್ಕೆ ಬಂದ ಮಹದೇವಪ್ಪ, ಹಾಸನದಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಪಾರ್ಟಿ ಫಂಡ್​ನ್ನು ಗೋಲ್ ಮಾಲ್ ಮಾಡುವ ಮೂಲಕ ಜೆಡಿಎಸ್​ ಗೆಲುವಿಗೆ ಸಹಾಯ ಮಾಡಿದ್ರಾ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಇನ್ನು ಎಚ್.ಸಿ.ಮಹದೇವಪ್ಪ ಈ ರಹಸ್ಯವನ್ನು ಚನ್ನರಾಯಪಟ್ಟಣದ ಕಾಂಗ್ರೆಸ್​ ಅಭ್ಯರ್ಥಿ ಸಿ.ಎಸ್.ಪುಟ್ಟೆಗೌಡರು ಕಾರ್ಯಕರ್ತರೊಬ್ಬರ ಬಳಿ ಮಾತನಾಡುವ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ. ದೇವೆಗೌಡರ್ ಮಾತು ಕೇಳಿ ಮಹದೇವಪ್ಪ ಕಾರ್ಯಕರ್ತರಿಗೆ ಹಾಗೂ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಪುಟ್ಟೆಗೌಡರು ತಮ್ಮ ನೋವು ತೋಡಿಕೊಂಡಿದ್ದು, ಇದೀಗ ಈ ಆಡಿಯೋ ರಾಜ್ಯದಾದ್ಯಂತ ವೈರಲ್​ ಆಗಿದೆ.