ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ದಲಿತರು !! ಹಾಸನದಲ್ಲೊಂದು ಹೃದಯವಿದ್ರಾವಕ ಪ್ರತಿಭಟನೆ !!

ಪ್ರಭುತ್ವದ ಕಣ್ತೆರೆಸಲು ಏನೆಲ್ಲಾ ಕಸರತ್ತು ಮಾಡಬೇಕು ನೋಡಿ. ದಿನಾ ಜಿಲ್ಲಾಧಿಕಾರಿ ಕಚೇರಿ ಎದುರು ನೂರು ಪ್ರತಿಭಟನೆ ಆಗುತ್ತದೆ. ಕೇಳೋರೇ ಇರಲ್ಲ. ಸಮುದಾಯ ಭವನಕ್ಕೆ ಜಾಗ ಕೊಡಿ ಎಂದು ಕೇಳಿದ ದಲಿತರ ದ್ವನಿ ಪ್ರಭುತ್ವವನ್ನು ಮುಟ್ಟದೇ ಇದ್ದಾಗ ಅವರು ಮಾಡಿದ ಪ್ರತಿಭಟನೆಯ ಸ್ವರೂಪ ಭೀಕರವಾದುದು.

 

 

ಬಾಬು ಜಗಜೀವನರಾಮ್ ಹೆಸರಿನಲ್ಲಿ ಸಮುದಾಯಭವನ ಕಟ್ಟಲು ಜಾಗ ನೀಡುತ್ತಿಲ್ಲ ಅಂತಾ ಆಕ್ರೋಶಗೊಂಡ ದಲಿತರು, ಮೈ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

 

 

ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಈ ಪ್ರತಿಭಟನೆ ನಡೆದಿದೆ. ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ಹಣ ಬಿಡುಗಡೆಯಾಗಿದ್ದರೂ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳ ಕೊಡಲು ಸತಾಯಿಸುತ್ತಿದ್ದಾರೆ ಅಂತಾ ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

ಇದೀಗ ತಮ್ಮ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದು, ಇನ್ನಾದರೂ ಸ್ಪಂದಿಸದೇ ಹೋದ್ರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here