ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ಅಧಿಕಾರಿ ಮರೆತ ಸರ್ಕಾರ!!

ಕರ್ತವ್ಯದಲ್ಲಿ ಇದ್ದಾಗಲೇ ಆನೆದಾಳಿಗೆ ತುತ್ತಾಗಿ ಸಾವನ್ನಪ್ಪಿದ ಅರಣ್ಯಾಧಿಕಾರಿ ಮಣಿಕಂಠನ್​ನ ಕುಟುಂಬಕ್ಕ ಸರ್ಕಾರ ಅಗೌರವ ತೋರಿರುವ ಆರೋಪ ಕೇಳಿಬಂದಿದೆ.

ad


ಚುನಾವಣೆ ಭರಾಟೆಯಲ್ಲಿರುವ ಸರ್ಕಾರ ಕಾಡಾನೆ ತುಳಿತಕ್ಕೆ ಸಾವನ್ನಪ್ಪಿದ ಮಣಿಕಂಠನ್​ ಮರೆತಿದ್ದು, ಸತ್ತು ವಾರ ಕಳೆದರೂ ಪರಿಹಾರ ಘೋಷಿಸಿಲ್ಲ. ಮಣಿಕಂಠನ್​ ಕುಟುಂಬದ ಆಧಾರಸ್ಥಂಭವನ್ನು ಕಳೆದುಕೊಂಡಿದ್ದು, ಮಣಿಕಂಠನ್ ಪುತ್ರ 10 ವರ್ಷಕ್ಕೆ ತಂಧೆ ಕಳೆದುಕೊಂಡು ಅನಾಥನಾಗಿದ್ದಾನೆ. ತಮಿಳುನಾಡಿನ ಮಧುರೈ ಸಮೀಪ ಥೇಣಿ ಗ್ರಾಮದವರಾದ ಮಣಿಕಂಠನ್ ಕಳೆದ ಹಲವು ವರ್ಷದಿಂದ ಮೈಸೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಣಿಕಂಠನ್​ ಸ್ವಾಮಿಗೆ ಸ್ವತಃ ಪ್ರಧಾನಿ ಕಂಬನಿ ಮಿಡಿದಿದ್ದರೂ ರಾಜ್ಯಸರ್ಕಾರ ಸ್ಪಂದಿಸಿರಲಿಲ್ಲ.

ಅರಣ್ಯ ಸಚಿವರಾಗಲಿ-ಸಿಎಂ ಸಿದ್ದರಾಮಯ್ಯನವರಾಗಲಿ ಅಧಿಕಾರಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸೌಜನ್ಯವನ್ನು ತೋರಿಲ್ಲ. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಬಿಟಿವಿನ್ಯೂಸ್​ನಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಎಚ್ಚೆತ್ತುಕೊಂಡಿದ್ದು, ಅವರ ಕುಟುಂಬಕ್ಕೆ ಯಾವ ರೀತಿಯ ಪರಿಹಾರ ಕೊಡಬೇಕೆಂದು‌ ಚಿಂತನೆ ನಡೆದಿದೆ, ಅವರ ಮನೆಯವರನ್ನೂ ಸಂಪರ್ಕ ಮಾಡಲಾಗುತ್ತಿದೆ. ಕುಟುಂಬಸ್ಥರಲ್ಲಿ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದಿದ್ದಾರೆ.