ಡಿಕೆಶಿ ಆರೋಗ್ಯ ಸ್ಥಿರ- ನಾಳೆ ಡಿಸ್ಚಾರ್ಜ್ ಸಾಧ್ಯತೆ- ಡಿಕೆಶಿ ಯಾವುದಕ್ಕು ಹೆದರಲ್ಲ ಅಂದ್ರು ಡಿ.ಕೆ.ಸುರೇಶ್ !

 

ad


ಅಪೋಲೊ ಆಸ್ಪತ್ರೆ ಸೇರಿರುವ ಜಲ ಸಂಪನ್ಮೂಲ ‌ಸಚಿವ ಡಿ ಕೆ ಶಿವಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಸಂಜೆ ಅಥವಾ ನಾಳೆ ವೇಳೆಗೆ ಡಿಸ್ಚಾರ್ಜ್ ಆಗಲಿದ್ದಾರೆ. ನಿನ್ನೆ ಪುಡ್ ಪಾಯಿಸನ್ ನಿಂದಾಗಿ ಅಸ್ವಸ್ಥರಾಗಿದ್ದ ಡಿಕೆಶಿಯವರನ್ನು ಶೇಷಾದ್ರಿಪುರಂನ ಅಪೋಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸದ್ಯ ಡಿಕೆಶಿಯ ಸಂಪೂರ್ಣ ತಪಾಸಣೆ ನಡೆಸಿರುವ ವೈದ್ಯರ ತಂಡ ಪುಡ್ ಪಾಯಿಸನ್ ನಿಂದಾಗಿ ಈ ರೀತಿಯಾಗಿ ಆಗಿದೆ ಸ್ವಲ್ಪ ರೆಸ್ಟ್ ಮಾಡಿದ್ರೆ ಎಲ್ಲವೂ ಸರಿ ಹೋಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಡಿಕೆಶಿ ಯಾವುದಕ್ಕೂ ಹೆದರಲ್ಲ.

 

 

ಸುರೇಶ್ ಶ್ಇನ್ನೂ ಅಣ್ಣನ ಆರೋಗ್ಯದ ಬಗ್ಗೆ ಮಾಹಿತಿ ತಮ್ಮ ಸಂಸದ ಡಿ ಕೆ ಸುರೇಶ್ ನಮ್ಮಣ್ಣ ಯಾವುದಕ್ಕೂ‌ ಹೆದರಲ್ಲ ಅಂತ ಹೇಳಿದ್ದಾರೆ. ಇಡಿಯಲ್ಲಿ ಇಸಿಐಆರ್ ದಾಖಲಾಗಿರುವುದರಿಂದ ಡಿಕೆಶಿ ಬಂಧನವಾಗುತ್ತೆ ಆದಕ್ಕೆ ಅನಾರೋಗ್ಯದ ನಾಟಕವಾಡ್ತಾ ಇದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುರೇಶ್ ಇಂತಹ ಯಾವುದೇ ವಿಚಾರಗಳಿಗೂ ಡಿಕೆಶಿ ಹೆದರಲ್ಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಎಲ್ಲಕ್ಕೂ ಉತ್ತರಿಸಲಿದ್ದಾರೆ ಎಂದ್ರು
ಇನ್ನೂ ಡಿಕೆಶಿ ಆರೋಗ್ಯ ವಿಚಾರಿಸಲು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದರು