ಈ ಬಾರಿ ಬಿಜೆಪಿಯನ್ನು ಒಂದಂಕಿಗೆ ಇಳಿಸುವುದೇ ನಮ್ಮ ಗುರಿ! ಸಚಿವ ಡಿ.ಕೆ.ಶಿವಕುಮಾರ್ !!

ಈ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎರಡಂಕಿಯಿಂದ ಒಂದಂಕಿಗೆ ಇಳಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ಮಂಗಳೂರಿನಲ್ಲಿ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ಕೈಗೊಂಡಿದ್ದ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಸುಳ್ಳಿನ ಆಧಾರದ ಮೇಲೆ ಸರ್ಕಾರವನ್ನು ರಚಿಸಿದ್ದರು ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಲು ಬಿಡುವುದಿಲ್ಲ, ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷವು ಒಂದೂಗೂಡಿರುವುದರಿಂದ 28 ಲೋಕಸಭಾ ಕ್ಷೇತ್ರಗಳ ಪೈಕಿ ಒಂದಕ್ಕಿಂತ ಸ್ಥಾನಗಳಿಸಿ, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುತ್ತೇವೆ.

ಶನಿವಾರ ಪ್ರಧಾನಿ ಮೋದಿಯವರು ಬಂದಿದ್ದರು. ಕಳೆದ ಬಾರಿ ಅಚ್ಛೇದಿನ್ ಎಂದು ಹೇಳುವ ಮೂಲಕ ಮತ ಕೇಳಿದ್ದರು, ಆದರೆ ಅಚ್ಛೇದಿನ್ ಇದೂವರೆಗೂ ಬರಲೇ ಇಲ್ಲ. ಅದರ ಬಗೆಗೆ ಮಾತನಾಡಲಿಲ್ಲ. ಅದೇ ರೀತಿ ಈ ಬಾರಿಯು ಪುನಃ ಸುಳ್ಳು ಹೇಳುತ್ತಾ ಜನರಲ್ಲಿ ಮತ ಕೇಳುತ್ತಿದ್ದಾರೆ. ಶನಿವಾರ ಬಂದವರು ಕೇಂದ್ರ ಸರ್ಕಾರದ ಸಾಧನೆಯ ರಿಪೋರ್ಟ್​ ಕಾರ್ಡ್​ ನೀಡಬಹುದು ಎಂಬ ನೀರಿಕ್ಷೆಯಲ್ಲಿ ಕೂಡ ಇತ್ತು. ಮೋದಿ ಸರ್ಕಾರ ನುಡಿದಂತೆ ನಡೆದಿಲ್ಲ. ಎಂದರು.

 

ಕಾಂಗ್ರೇಸ್ ನ ವಿರುದ್ದ ಅಸಮಾಧಾನ ಹೊಂದಿರುವವರು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದವರು, ನಮ್ಮ ಪಕ್ಷದ ಕಾರ್ಯಕರ್ತರು ಅವರ ವಿರುದ್ಧ ದೀರ್ಘಕಾಲ ಹೊರಟ ಮಾಡಿದ್ದವರು, ನಮ್ಮ ಪಕ್ಷಕ್ಕೆ ಬಂದಾಗ ಬೆಂಬಲ ನೀಡಿದ್ದರು. ಆದರೀಗಾ ಅವರೇ ಅಸಮಾಧಾನ ಹೊರಹಾಕಿದ್ದಾರೆ. ಇದೆಲ್ಲವೂ ಶೀಘ್ರವೇ ಸರಿಹೀಗಲಿದೆ.ಮಂಡ್ಯ ಹಾಸನ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಇದ್ದ ಅಸಮಾದಾನವು ಬಹುತೇಕ ಬಗೆಹರಿದಿದ್ದು, ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಬಹುತೇಕ ಲಾಭ ಆಗಲಿದೆ ಎಂದು ತಿಳಿಸಿದರು.

ನಳಿನ್ ಕುಮಾರ್ 10 ವರ್ಷ ದಕ್ಷಿಣ ಕನ್ನಡದ ಸಂಸದನಾಗಿದ್ದರು, ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು ಎಂದು ವರದಿ ಸಲ್ಲಿಸಲಿ ನೋಡೋಣ, ಜಿಲ್ಲೆ ಸಮಸ್ಯೆಯನ್ನು ಕುರಿತು ಒಂದು ದಿನವೂ ಸಂಸತ್ತಿನಲ್ಲಿ ಮಾತನಾಡದ ನಳಿನ್ ಕುಮಾರ್ ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡುತ್ತಾರೆ. ಉತ್ಸಾಹಿ ಯುವಕ ಎಲ್ಲಾ ಜಾತಿ,ಧರ್ಮದ ಬಗೆಗೆ ಭೇದ ವಿಲ್ಲದ ಮಿಥುನ್ ರೈ ರವರು ಬೆಂಬಲಿಸಬೇಕೆಂದು ಜನರಲ್ಲಿ ಡಿಕೆಶಿ ಮನವಿ ಮಾಡಿದರು.

ಕೇಂದ್ರ ಸಚಿವ ಡಿವಿ ಸದಾನಂದಾ ಗೌಡ, ಸಂಸದೆ ಶೋಭ ಕರಂದ್ಲಾಜೆ, ನಳಿನ್ ಕುಮಾರ್ 28 ರಾಜ್ಯಗಳ ನಿಯೋಗಗಳನ್ನು ಒಟ್ಟಾಗಿ ಸೇರಿಸಿ ಒತ್ತಡ ಹೇರಿದ್ದರೆ, ಇಂದು ವಿಜಯ ಬ್ಯಾಂಕ್ ವಿಲೀನಗೊಳ್ಳುತ್ತಿರಲಿಲ್ಲ, ಇಂತಹ ಪ್ರಯತ್ನವನ್ನು ಮಾಡದ ಇವರು ಎಂದಿಗೊ ರಾಜೀನಾಮೆಯನ್ನು ನೀಡಬೇಕಿತ್ತು. ಎಂದು ಸಚಿವ ಡಿಕೆ ಶಿವಕುಮಾರ್ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.